ಟ್ವೆಂಟಿ-20 ವಿಶ್ವಕಪ್‌ಗೆ ಸಂಪೂರ್ಣ ಫಿಟ್: ವ್ಯಾಟ್ಸನ್ ವಿಶ್ವಾಸ
Update: 2016-02-16 23:33 IST
ಸಿಡ್ನಿ, ಫೆ.16: ಗಾಯದಿಂದ ಚೇತರಿಸಿಕೊಂಡು ಮುಂದಿನ ವರ್ಷ ಭಾರತದಲ್ಲಿ ನಡೆಯಲಿರುವ ಟ್ವೆಂಟಿ-20 ವಿಶ್ವಕಪ್‌ನ ವೇಳೆಗೆ ಸಂಪೂರ್ಣ ಫಿಟ್‌ನೆಸ್ ಪಡೆಯುವುದಾಗಿ ಆಸ್ಟ್ರೇಲಿಯದ ಆಲ್‌ರೌಂಡರ್ ಶೇನ್ ವ್ಯಾಟ್ಸನ್ ಹೇಳಿದ್ದಾರೆ.
ಆಸ್ಟ್ರೇಲಿಯ ಪ್ರಕಟಿಸಿರುವ 15 ಸದಸ್ಯರ ವಿಶ್ವಕಪ್ ತಂಡದಲ್ಲಿ ವ್ಯಾಟ್ಸನ್ ಸಹಿತ ನಾಲ್ವರು ಆಟಗಾರರು ಗಾಯದ ಸಮಸ್ಯೆ ಎದುರಿಸುತ್ತಿದ್ದಾರೆ. ಆ್ಯರೊನ್ ಫಿಂಚ್, ಜೇಮ್ಸ್ ಫಾಕ್ನರ್ ಹಾಗೂ ನಥನ್ ಕೌಲ್ಟರ್-ನೀಲ್ ವಿಶ್ವಕಪ್ ಆರಂಭವಾಗುವ ವೇಳೆ ಸಂಪೂರ್ಣ ಫಿಟ್‌ನೆಸ್ ಪಡೆಯುವ ವಿಶ್ವಾಸದಲ್ಲಿದ್ದಾರೆ.
ಯುಎಇನಲ್ಲಿ ನಡೆಯುತ್ತಿರುವ ಪಾಕಿಸ್ತಾನ ಸೂಪರ್ ಲೀಗ್(ಪಿಎಸ್‌ಎಲ್)ನಲ್ಲಿ ಇಸ್ಲಾಮಾಬಾದ್ ಯುನೈಟೆಡ್ ತಂಡವನ್ನು ಪ್ರತಿನಿಧಿಸುತ್ತಿರುವ ವ್ಯಾಟ್ಸನ್ ಪಿಎಸ್‌ಎಲ್‌ನಲ್ಲಿ ಭಾಗವಹಿಸಲು ತೆರಳಲಿದ್ದಾರೆ.
ಈಗಾಗಲೇ ಹಲವು ರೀತಿಯ ಸ್ಕಾನಿಂಗ್‌ಗೆ ಒಳಪಟ್ಟಿರುವ 34ರಹರೆಯದ ವ್ಯಾಟ್ಸನ್ ಕೆಲವೇ ವಾರಗಳಲ್ಲಿ ಸಂಪೂರ್ಣ ಫಿಟ್‌ನೆಸ್ ಪಡೆಯುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ.