ಭಾರತದ ಮಹಿಳಾ ತಂಡಕ್ಕೆ ಜಯ - ನಾಯಕಿ ಮಿಥಾಲಿ ರಾಜ್ ಸಾಹಸ
ರಾಂಚಿ, ಫೆ.17: ನಾಯಕಿ ಮಿಥಾಲಿ ರಾಜ್ ಸಾಹಸದ ನೆರವಿನಲ್ಲಿ ಭಾರತದ ಮಹಿಳಾ ಕ್ರಿಕೆಟ್ ತಂಡ ಶ್ರೀಲಂಕಾ ವಿರುದ್ಧ ಇಲ್ಲಿ ನಡೆದ ಎರಡನೆ ಏಕದಿನ ಪಂದ್ಯದಲ್ಲಿ ಆರು ವಿಕೆಟ್‌ಗಳ ಜಯ ಗಳಿಸಿದ್ದು, ಮೂರು ಪಂದ್ಯಗಳ ಸರಣಿಯನ್ನು 2-0 ಅಂತರದಿಂದ ವಶಪಡಿಸಿಕೊಂಡಿದೆ.
ಇಲ್ಲಿನ ಜೆಎಸ್‌ಸಿಎ ಇಂಟರ್‌ನ್ಯಶನಲ್ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಗೆಲುವಿಗೆ 179 ರನ್‌ಗಳ ಸವಾಲನ್ನು ಪಡೆದ ಭಾರತದ ವನಿತೆಯರ ತಂಡ ಇನ್ನೂ 41 ಎಸೆತಗಳು ಬಾಕಿ ಇರುವಾಗಲೇ 4 ವಿಕೆಟ್ ನಷ್ಟದಲ್ಲಿ ಅಗತ್ಯದ ರನ್ ಸೇರಿಸಿ ಗೆಲುವಿನ ದಡ ಸೇರಿತು.
ನಾಯಕಿ ಮಿಥಾಲಿ ರಾಜ್ 53 ರನ್(114ನಿ, 80ಎ, 4ಬೌ), ಆರಂಭಿಕ ಆಟಗಾರ್ತಿ ಸ್ಮತಿ ಮಂಧಾನ 46 ರನ್(46ಎ, 4ಬೌ,1ಸಿ), ಎಚ್.ಕೌರ್ 41(61ಎ,6ಬೌ) ಮತ್ತು ಕಾಮಿನಿ 26 ರನ್ ಗಳಿಸಿ ತಂಡವನ್ನು ಗೆಲುವಿನ ದಡ ಸೇರಿಸಿದರು.
ಆರಂಭಿಕ ಆಟಗಾರ್ತಿ ಸ್ಮತಿ ಮಂಧಾನ ಮತ್ತು ತಿರುಶ್ ಕಾಮಿನಿ ಮೊದಲ ವಿಕೆಟ್‌ಗೆ 67 ರನ್‌ಗಳ ಜೊತೆಯಾಟ ನೀಡಿ ತಂಡಕ್ಕೆ ಉತ್ತಮ ಅಡಿಪಾಯ ಹಾಕಿಕೊಟ್ಟರು. ಶ್ರೀಲಂಕಾದ ಸುಗಂಧಿಕ ಕುಮಾರಿ 39ಕ್ಕೆ 4 ವಿಕೆಟ್ ಉಡಾಯಿಸಿದರು.
ಟಾಸ್ ಜಯಿಸಿ ಬ್ಯಾಟಿಂಗ್ ಆಯ್ದುಕೊಂಡ ಶ್ರೀಲಂಕಾ ತಂಡ ನಿಗದಿತ 50 ಓವರ್‌ಗಳಲ್ಲಿ 9 ವಿಕೆಟ್ ನಷ್ಟದಲ್ಲಿ 178 ರನ್ ಗಳಿಸಿತ್ತು.
ದಿಲಾನಿ ಮನೋದಾರ (ಔಟಾಗದೆ 43) ಮತ್ತು ಪ್ರಸಾದನಿ ವೀರಕ್ಕೊಡಿ (37) ಶ್ರೀಲಂಕಾ ಪರ ದೊಡ್ಡ ಸ್ಕೋರ್ ದಾಖಲಿಸಿದ್ದರು. ಭಾರತದ ಪರ ಹದಿನೆಂಟರ ಹರಿಯದ ಮಧ್ಯಮ ವೇಗಿ ದೀಪ್ತಿ ಶರ್ಮ 23ಕ್ಕೆ 4 ವಿಕೆಟ್ ಉಡಾಯಿಸಿ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.
ಸಂಕ್ಷಿಪ್ತ ಸ್ಕೋರ್ ವಿವರ
ಶ್ರೀಲಂಕಾ 50 ಓವರ್‌ಗಳಲ್ಲಿ 178/9(ದಿಲಾನಿ ಮನೋದಾರ ಔಟಾಗದೆ 43,ಪ್ರಸಾದನಿ ವೀರಕ್ಕೊಡಿ 37; ದೀಪ್ತಿ ಶರ್ಮ 23ಕ್ಕೆ 4 )
ಭಾರತ 43.1 ಓವರ್‌ಗಳಲ್ಲಿ 179/4(ನಾಯಕಿ ಮಿಥಾಲಿ ರಾಜ್ 53 , ಸ್ಮತಿ ಮಂಧಾನ 46 , ಎಚ್.ಕೌರ್ 41,ಕಾಮಿನಿ 26; ಸುಗಂಧಿಕ ಕುಮಾರಿ 39ಕ್ಕೆ 4 ).