ಮಹೇಶ್ ಭೂಪತಿ-ಯೂಕಿ ಭಾಂಬ್ರಿ ಫೈನಲ್‌ಗೆ
ದಿಲ್ಲಿ ಓಪನ್ ಟೆನಿಸ್ ಟೂರ್ನಮೆಂಟ್
ಹೊಸದಿಲ್ಲಿ, ಫೆ.19: ಮಹೇಶ್ ಭೂಪತಿ ಹಾಗೂ ಯೂಕಿ ಭಾಂಬ್ರಿ ಜೋಡಿ ದಿಲ್ಲಿ ಓಪನ್ ಟೆನಿಸ್ ಟೂರ್ನಮೆಂಟ್‌ನ ಪುರುಷರ ಡಬಲ್ಸ್‌ನಲ್ಲಿ ಫೈನಲ್‌ಗೆ ಲಗ್ಗೆ ಇಟ್ಟಿದ್ದಾರೆ.
ಶುಕ್ರವಾರ ಇಲ್ಲಿನ ಡಿಎಲ್‌ಟಿಎ ಕಾಂಪ್ಲೆಕ್ಸ್‌ನಲ್ಲಿ ನಡೆದ ಪುರುಷರ ಡಬಲ್ಸ್‌ನ ಸೆಮಿ ಫೈನಲ್‌ನಲ್ಲಿ ಭೂಪತಿ ಹಾಗೂ ಯೂಕಿ ಜೋಡಿ ಚೈನೀಸ್ ತೈಪೆಯ ಜಿಮ್ಮಿ ವಾಂಗ್ ಹಾಗೂ ಚೀನಾದ ಝಿ ಝಾಂಗ್‌ರನ್ನು 6-1, 6-3 ಸೆಟ್‌ಗಳ ಅಂತರದಿಂದ ಸುಲಭವಾಗಿ ಸೋಲಿಸಿತು.
ಭೂಪತಿ ಹಾಗೂ ಯೂಕಿ ಪ್ರಶಸ್ತಿ ಸುತ್ತಿನಲ್ಲಿ ತಮ್ಮದೇ ದೇಶದ ಸಾಕೇತ್ ಮೈನೇನಿ ಹಾಗೂ ಸನಮ್ ಸಿಂಗ್‌ರನ್ನು ಎದುರಿಸಲಿದ್ದಾರೆ.
ದಿನದ ಮತ್ತೊಂದು ಸೆಮಿ ಫೈನಲ್‌ನಲ್ಲಿ ನಾಲ್ಕನೆ ಶ್ರೇಯಾಂಕದ ಮೈನೇನಿ ಹಾಗೂ ಸನಮ್ ಅಗ್ರ ಶ್ರೇಯಾಂಕದ ಫ್ಲಾವಿಯಾ ಸಿಪೊಲ್ಲಾ ಹಾಗೂ ಡಿವಿಜ್ ಶರಣ್‌ರನ್ನು 6-3, 6-3 ಸೆಟ್‌ಗಳ ಅಂತರದಿಂದ ಸೋಲಿಸಿದರು.
ಪುರುಷರ ಸಿಂಗಲ್ಸ್ ಕ್ವಾರ್ಟರ್ ಫೈನಲ್‌ನಲ್ಲಿ ಚೀನಾದ ಝಿ ಲಿ ಅವರನ್ನು 6-4, 6-1 ಸೆಟ್‌ಗಳ ಅಂತರದಿಂದ ಮಣಿಸಿದ ಮೈನೇನಿ ಅವರು ಸೆಮಿ ಫೈನಲ್‌ಗೆ ಪ್ರವೇಶಿಸಿದರು.
ಮಹಿಳೆಯರ ಸಿಂಗಲ್ಸ್‌ನ ಸೆಮಿ ಫೈನಲ್‌ನಲ್ಲಿ ಅಂಕಿತಾ ರೈನಾ ಅವರು ಉಝ್ಬೆಕಿಸ್ತಾನದ ಸಬೀನಾ ಶರಿಪೋವಾರನ್ನು 3-6, 4-6 ಸೆಟ್‌ಗಳ ಅಂತರದಿಂದ ಸೋಲಿಸಿದರು