×
Ad

ಏಷ್ಯಾಕಪ್: ಒಮನ್‌ಗೆ ರೋಚಕ ಜಯ, ಬಾಬರ್ ಶತಕ ವ್ಯರ್ಥ

Update: 2016-02-19 23:41 IST

ಫತಾವುಲ್ಲಾ, ಫೆ.19: ಏಷ್ಯಾಕಪ್ ಅರ್ಹತಾ ಸುತ್ತಿನ 2ನೆ ಪಂದ್ಯದಲ್ಲಿ ಬಾಬರ್ ಹಯಾತ್ ಭರ್ಜರಿ ಶತಕ ಬಾರಿಸಿದ(122ರನ್) ಹೊರತಾಗಿಯೂ ಒಮನ್ ತಂಡ ಹಾಂಕಾಂಗ್ ತಂಡವನ್ನು 5 ರನ್‌ಗಳಿಂದ ರೋಚಕವಾಗಿ ಮಣಿಸಿದೆ.

ಶುಕ್ರವಾರ ಇಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ್ದ ಒಮನ್ ತಂಡ ಜತಿಂದರ್ ಸಿಂಗ್(42), ಮೆಹ್ರಾನ್ ಖಾನ್(ಔಟಾಗದೆ 28), ಅಮಿರ್ ಅಲಿ(ಔಟಾಗದೆ 32) ಸಂಘಟಿತ ಪ್ರದರ್ಶನದ ನೆರವಿನಿಂದ 20 ಓವರ್‌ಗಳಲ್ಲಿ 5 ವಿಕೆಟ್‌ಗಳ ನಷ್ಟಕ್ಕೆ 180 ರನ್ ಕಲೆ ಹಾಕಿತು.

ಗೆಲ್ಲಲು ಕಠಿಣ ಸವಾಲು ಪಡೆದ ಹಾಂಕಾಂಗ್ ತಂಡ ಅಗ್ರ ಕ್ರಮಾಂಕದ ದಾಂಡಿಗ ಹಯಾತ್(122 ರನ್, 60 ಎಸೆತ, 9 ಬೌಂಡರಿ, 7 ಸಿಕ್ಸರ್) ಏಕಾಂಗಿ ಹೋರಾಟದ ಹೊರತಾಗಿಯೂ ಕೇವಲ 5 ರನ್‌ನಿಂದ ಸೋಲನುಭವಿಸಿತು.

ಒಮನ್‌ನ ಪರ ಬಿಲಾಲ್ ಖಾನ್(1-28), ಲಾಲ್‌ಚೆಟಾ(1-29), ಅನ್ಸಾರಿ(1-30), ಮಕ್ಸೂದ್(1-54) ಹಾಗೂ ಆಮಿರ್ ಅಲಿ(1-6) ತಲಾ ಒಂದು ವಿಕೆಟ್ ಉರುಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News