×
Ad

ಪಾಟ್ನಾದ ಗೆಲುವಿನ ಓಟಕ್ಕೆ ಬ್ರೇಕ್

Update: 2016-02-19 23:42 IST

ಪ್ರೊ ಕಬಡ್ಡಿ ಲೀಗ್

ಪಾಟ್ನಾ, ಫೆ.19: ಪ್ರೊ ಕಬಡ್ಡಿ ಲೀಗ್‌ನಲ್ಲಿ ಬೆಂಗಾಲ್ ವಾರಿಯರ್ಸ್‌ ಹಾಗೂ ಯೂ ಮುಂಬಾ ತಂಡಗಳು ಗೆಲುವು ಸಾಧಿಸಿವೆ. ಮುಂಬಾ ತಂಡ ಪಾಟ್ನಾದ ಅಜೇಯ ಗೆಲುವಿನ ಓಟಕ್ಕೆ ಬ್ರೇಕ್ ಹಾಕಿದೆ.

ಶುಕ್ರವಾರ ನಡೆದ ಲೀಗ್‌ನ 34ನೆ ಪಂದ್ಯದಲ್ಲಿ ಬೆಂಗಾಲ ತಂಡ ತೆಲುಗು ಟೈಟಾನ್ಸ್ ತಂಡವನ್ನು 4 ಅಂಕಗಳಿಂದ ಮಣಿಸಿತು.

ಯೂ ಮುಂಬಾ ತಂಡ ಪಾಟ್ನಾ ಪೈರಟ್ಸ್ ತಂಡವನ್ನು 6 ಅಂಕಗಳ ಅಂತರದಿಂದ ಮಣಿಸಿತು. ಈ ಮೂಲಕ ಪಾಟ್ನಾದ ಅಜೇಯ ಗೆಲುವಿನ ಓಟಕ್ಕೆ ಕಡಿವಾಣ ಬಿತ್ತು.

ಪಾಟ್ನಾ 11 ಪಂದ್ಯಗಳಲ್ಲಿ 8 ಗೆಲುವು, 2 ರಲ್ಲಿ ಡ್ರಾ, ಒಂದರಲ್ಲಿ ಸೋತಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News