ಬ್ರಿಟನ್‌ಗೆ ವಿಶೇಷ ಸ್ಥಾನಮಾನಕ್ಕೆ ಯುರೋಪ್ ಒಕ್ಕೂಟ ಅಸ್ತು
ಬ್ರುಸೆಲ್ಸ್, ಫೆ.20: ಯುರೋಪ್ ಒಕ್ಕೂಟದಲ್ಲಿ ಬ್ರಿಟನ್‌ಗೆ ವಿಶೇಷ ಸ್ಥಾನಮಾನ ನೀಡುವ ನಿಟ್ಟಿನಲ್ಲಿ ಬ್ರಿಟಿಷ್ ಪ್ರಧಾನಿ ಡೇವಿಡ್ ಕೆಮರೂನ್ ಐರೋಪ್ಯ ರಾಷ್ಟ್ರಗಳ ನಾಯಕರ ಜೊತೆ ಶನಿವಾರ ಮಹತ್ವದ ಒಪ್ಪಂದವೊಂದನ್ನು ಏರ್ಪಡಿಸಿಕೊಂಡಿದ್ದಾರೆ. ಯುರೋಪ್ ಒಕ್ಕೂಟಕ್ಕೆ ಬ್ರಿಟನ್‌ನ ವಿಶೇಷ ಸ್ಥಾನಮಾನವನ್ನು ಬಲಪಡಿಸುವ ಕಾನೂನುಬದ್ಧ ಹಾಗೂ ಹಿಂದೆಗೆದುಕೊಳ್ಳಲಾಗದಂತಹ ಒಪ್ಪಂದವೊಂದನ್ನು ಎಲ್ಲಾ 28 ನಾಯಕರ ಜೊತೆ ಏರ್ಪಡಿಸುವಲ್ಲಿ ಯಶಸ್ವಿಯಾಗಿದ್ದೇವೆ. ಆ ಮೂಲಕ ಯುರೋಪ್ ಒಕ್ಕೂಟದಲ್ಲಿ ಬ್ರಿಟನ್‌ನ ವಿಶೇಷ ಸ್ಥಾನಮಾನವನ್ನು ಇನ್ನಷ್ಟು ಬಲಪಡಿಸಿದಂತಾಗಿದೆಯೆಂದು ಕೆಮರೂನ್ ಹೇಳಿದ್ದಾರೆ.
ಒಪ್ಪಂದದ ಬಳಿಕ ಕೆಮರೂನ್ ಸುದ್ದಿಗಾರರ ಜೊತೆ ಮಾತನಾಡುತ್ತಾ, ಈ ಒಪ್ಪಂದದ ಬಳಿಕ ಯುರೋಪ್ ಒಕ್ಕೂಟದ ವಲಸಿಗರಿಗಾಗಿನ ಕಲ್ಯಾಣ ಯೋಜನೆಗಳ ಬಗ್ಗೆ ಬ್ರಿಟನ್ ಕಠಿಣವಾದ ನಿರ್ಬಂಧಗಳನ್ನು ವಿಧಿಸಲಿದೆ. ಬ್ರಿಟನ್‌ನಲ್ಲಿ ಯುರೋ ಕರೆನ್ಸಿ ವ್ಯವಸ್ಥೆಗೆ ಯಾವತ್ತೂ ಒಳಪಡುವುದಿಲ್ಲ ಹಾಗೂ ನಮ್ಮ ಆರ್ಥಿಕತೆಯು ಸುಭದ್ರವಾಗಿರುವುದು ಎಂದು ತಿಳಿಸಿದ್ದಾರೆ.