ಏಷ್ಯಾಕಪ್: ಧೋನಿ ಗಾಯಾಳು - ಪಾರ್ಥಿವ್ ಪಟೇಲ್‌ಗೆ ಬುಲಾವ್
Update: 2016-02-22 21:13 IST
ಢಾಕಾ, ಫೆ.22: ಮುಂಬರುವ ಏಷ್ಯಾಕಪ್ ಟ್ವೆಂಟಿ-20 ಟೂರ್ನಮೆಂಟ್‌ಗೆ ಅಭ್ಯಾಸ ಆರಂಭಿಸಿದ ಮೊದಲ ದಿನವೇ ಭಾರತಕ್ಕೆ ಸಮಸ್ಯೆ ಎದುರಾಗಿದೆ. ನಾಯಕ ಮಹೇಂದ್ರ ಸಿಂಗ್ ಧೋನಿ ಗಾಯಗೊಂಡಿದ್ದಾರೆ.
ಬೆನ್ನುನೋವಿನಿಂದ ಬಳಲುತ್ತಿರುವ ಧೋನಿಗೆ ವಿಕೆಟ್ ಕೀಪಿಂಗ್ ಜವಾಬ್ದಾರಿಯನ್ನು ನಿರ್ವಹಿಸಲು ಸಾಧ್ಯವಾಗುತ್ತಿಲ್ಲ. ಈ ಕಾರಣದಿಂದಾಗಿ ಬದಲಿ ವಿಕೆಟ್ ಕೀಪರ್ ಆಗಿ ಪಾರ್ಥಿವ್ ಪಟೇಲ್ ಅವರು ತಂಡದಲ್ಲಿ ಸ್ಥಾನ ಪಡೆದಿದ್ದಾರೆ.
ಬಿಸಿಸಿಐನ ಆಯ್ಕೆ ಸಮಿತಿಯು ಪಾರ್ಥಿವ್ ಪಟೇಲ್‌ರನ್ನು ಏಷ್ಯಾಕಪ್‌ಗೆ ಬದಲಿ ವಿಕೆಟ್ ಕೀಪರ್ ಆಗಿ ಆಯ್ಕೆ ಮಾಡಿದೆ.
ಪಟೇಲ್ ಶೀಘ್ರದಲ್ಲೇ ಢಾಕಾ ತಲುಪಲಿದ್ದಾರೆ. ಫೆ.24ರಂದು ಭಾರತ ಏಷ್ಯಾಕಪ್‌ನಲ್ಲಿ ಆತಿಥೇಯ ಬಾಂಗ್ಲಾದೇಶ ತಂಡವನ್ನು ಎದುರಿಸಲಿದೆ.