×
Ad

ಪಾಕ್‌ನ ಏಷ್ಯಾಕಪ್, ವಿಶ್ವಕಪ್ ತಂಡದಲ್ಲಿ ಬದಲಾವಣೆ

Update: 2016-02-23 23:16 IST

ಕರಾಚಿ, ಫೆ.23: ಪಾಕಿಸ್ತಾನ ಕ್ರಿಕೆಟ್ ಮಂಡಳಿ ಮುಂಬರುವ ಏಷ್ಯಾಕಪ್ ಹಾಗೂ ಟ್ವೆಂಟಿ-20 ವಿಶ್ವಕಪ್ ಟೂರ್ನಮೆಂಟ್‌ಗಳಿಗೆ ಗಾಯಗೊಂಡಿರುವ ಬಾಬರ್ ಆಝಂ ಹಾಗೂ ರುಮಾನ್ ರಾಯೀಸ್ ಬದಲಿಗೆ ಶಾರ್ಜೀಲ್ ಖಾನ್ ಹಾಗೂ ವೇಗದ ಬೌಲರ್ ಮುಹಮ್ಮದ್ ಸಮಿ ಅವರನ್ನು ಆಯ್ಕೆ ಮಾಡಿದೆ.

ದುಬೈನಲ್ಲಿ ನಡೆದ ಪಾಕಿಸಾನ ಪ್ರೀಮಿಯರ್ ಲೀಗ್‌ನ ವೇಳೆ ಆಝಂ ಹಾಗೂ ರುಮಾನ್ ಗಾಯಗೊಂಡಿರುವ ಕಾರಣ ತಂಡದಲ್ಲಿ ಬದಲಾವಣೆ ಮಾಡುವುದು ಅನಿವಾರ್ಯವಾಗಿದೆ.

ಈ ಇಬ್ಬರು ಆಟಗಾರರು ಪಾಕ್ ಪರ ಇನ್ನೂ ಟ್ವೆಂಟಿ-20 ಪಂದ್ಯವನ್ನು ಆಡಿಲ್ಲ ಎಂದು ಪಿಸಿಬಿ ಹೇಳಿದೆ. ಇತ್ತೀಚೆಗೆ 8 ಪಿಎಸ್‌ಎಲ್ ಪಂದ್ಯಗಳಲ್ಲಿ ಒಟ್ಟು 190 ರನ್ ಗಳಿಸಿದ್ದ ಇನ್ನೋರ್ವ ದಾಂಡಿಗ ಖಾಲಿದ್ ಲತೀಫ್ ಟ್ವೆಂಟಿ-20 ವಿಶ್ವಕಪ್‌ಗೆ ಆಯ್ಕೆಯಾಗಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News