×
Ad

ಸತತ ಆರನೆ ಬಾರಿ ವಿಶ್ವಕಪ್ ಆಡಲಿರುವ ಧೋನಿ, ರೋಹಿತ್, ಯುವಿ

Update: 2016-02-23 23:18 IST

ಮೀರ್ಪುರ, ಫೆ.23: ಭಾರತದ ನಾಯಕ ಎಂ.ಎಸ್. ಧೋನಿ, ರೋಹಿತ್ ಶರ್ಮ ಹಾಗೂ ಯುವರಾಜ್ ಸಿಂಗ್ ಸಹಿತ 19 ಕ್ರಿಕೆಟಿಗರು ಮುಂದಿನ ತಿಂಗಳು ಭಾರತದಲ್ಲಿ ಆರಂಭವಾಗಲಿರುವ ಐಸಿಸಿ ಟ್ವೆಂಟಿ-20 ವಿಶ್ವಕಪ್‌ನಲ್ಲಿ ಸತತ ಆರನೆ ಬಾರಿ ಆಡಲಿದ್ದಾರೆ.

ಭಾರತದ ಮಿಥಾಲಿ ರಾಜ್ ಹಾಗೂ ಜುಲನ್ ಗೋಸ್ವಾಮಿ ಸಹಿತ 29 ಮಹಿಳಾ ಕ್ರಿಕೆಟಿಗರು ಸತತ ಐದನೆ ಬಾರಿ ಮೇಗಾ ಸ್ಪರ್ಧೆಯಲ್ಲಿ ಕಾಣಿಸಿಕೊಳ್ಳಲಿದ್ದಾರೆ.

2009 ರಿಂದ ಪುರುಷರ ವಿಶ್ವಕಪ್‌ನೊಂದಿಗೆ ಮಹಿಳಾ ವಿಶ್ವಕಪ್‌ನ್ನು ನಡೆಸಿಕೊಂಡು ಬರಲಾಗುತ್ತಿದ್ದು, ವಿಂಡೀಸ್ ಈ ತನಕ ಎಲ್ಲ ವಿಶ್ವಕಪ್‌ನಲ್ಲಿ ಆರು ಆಟಗಾರ್ತಿಯರನ್ನು ಕಣಕ್ಕಿಳಿಸಿದೆ.

ಪುರುಷರ ವಿಶ್ವಕಪ್‌ನಲ್ಲಿ ಬಾಂಗ್ಲಾದೇಶ ಈ ತನಕ ಐದು ಬಾರಿ ವಿಶ್ವಕಪ್ ಆಡಿರುವ ಐವರು ಆಟಗಾರರನ್ನು ಕಣಕ್ಕಿಳಿಸಲಿದೆ. ಮುಶ್ರಾಫ್ ಬಿನ್ ಮೊರ್ತಾಝಾ, ಶಾಕಿಬ್ ಅಲ್ ಹಸನ್, ತಮೀಮ್ ಇಕ್ಬಾಲ್, ಮಹ್ಮೂದುಲ್ಲಾ ಹಾಗೂ ಮುಶ್ಫಿಕುರ್ರಹೀಂ ಸತತ 5ನೆ ಬಾರಿ ವಿಶ್ವಕಪ್‌ನಲ್ಲಿ ಆಡುತ್ತಿದ್ದಾರೆ.

ಭಾರತ ಹಾಗೂ ವೆಸ್ಟ್‌ಇಂಡೀಸ್‌ನ ತಲಾ ಮೂವರು ಆಟಗಾರರು ಸತತ 5ನೆ ಬಾರಿ ವಿಶ್ವಕಪ್‌ನಲ್ಲಿ ಆಡುತ್ತಿದ್ದಾರೆ. ವಿಂಡೀಸ್‌ನ ಡ್ವೇಯ್ನಾ ಬ್ರಾವೊ, ಕ್ರಿಸ್ ಗೇಲ್ ಹಾಗೂ ದಿನೇಶ್ ರಾಮ್ದೀನ್ 5ನೆ ಬಾರಿ ವಿಂಡೀಸ್‌ನ ಪರ ಆಡುತ್ತಿದ್ದಾರೆ.

ನಥನ್ ಮೆಕಲಮ್, ರಾಸ್ ಟೇಲರ್(ನ್ಯೂಝಿಲೆಂಡ್), ಎಬಿಡಿ ವಿಲಿಯರ್ಸ್, ಜೆಪಿ ಡುಮಿನಿ(ದಕ್ಷಿಣ ಆಫ್ರಿಕ), ತಿಲಕರತ್ನೆ ದಿಲ್ಶನ್, ಲಸಿತ್ ಮಾಲಿಂಗ(ಶ್ರೀಲಂಕಾ), ಶಾಹಿದ್ ಅಫ್ರಿದಿ(ಪಾಕಿಸ್ತಾನ) ಹಾಗೂ ಶೇನ್ ವ್ಯಾಟ್ಸನ್(ಆಸ್ಟ್ರೇಲಿಯ) ಸತತ ಆರನೆ ಬಾರಿ ಐಸಿಸಿ ಟ್ವೆಂಟಿ-20 ವಿಶ್ವಕಪ್‌ನಲ್ಲಿ ಭಾಗವಹಿಸುತ್ತಿದ್ದಾರೆ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News