×
Ad

ಫೆಲೆಸ್ತೀನ್ ಬಂಧಿತರ ಮೇಲೆ ದೌರ್ಜನ್ಯ: ಇಸ್ರೇಲಿ ಎನ್‌ಜಿಒಗಳಿಂದ ಆರೋಪ

Update: 2016-02-24 23:51 IST

ಜೆರುಸಲೇಂ, ಫೆ. 24: ಇಸ್ರೇಲ್‌ನ ಭದ್ರತಾ ಸಂಸ್ಥೆ ಶಿನ್ ಬೆಟ್ ತನ್ನ ಬಂಧನದಲ್ಲಿರುವ ಫೆಲೆಸ್ತೀನೀಯರ ಮೇಲೆ ವ್ಯವಸ್ಥಿತವಾಗಿ ದೌರ್ಜನ್ಯ ನಡೆಸುತ್ತಿದ್ದು, ಅದಕ್ಕೆ ಸರಕಾರದ ಮಾನ್ಯತೆ ಇದೆ ಎಂದು ಇಸ್ರೇಲ್‌ನ ಎರಡು ಸರಕಾರೇತರ ಸಂಸ್ಥೆ (ಎನ್‌ಜಿಒ)ಗಳು ಆರೋಪಿಸಿವೆ.ಮಾನವಹಕ್ಕು ಸಂಘಟನೆಗಳಾದ ಬಿ’ಸೆಲಂ ಮತ್ತು ಹಮೋಕೆಡ್ ಬುಧವಾರ ಬಿಡುಗಡೆ ಮಾಡಿದ 70 ಪುಟಗಳ ಜಂಟಿ ವರದಿಯಲ್ಲಿ ಈ ವಿಷಯವನ್ನು ಪ್ರಸ್ತಾಪಿಸಿವೆ.
ದಕ್ಷಿಣದ ಇಸ್ರೇಲಿ ನಗರ ಅಶ್ಕೆಲಾನ್‌ನ ಶಿಕ್ಮ ಜೈಲಿನಲ್ಲಿ ಆಗಸ್ಟ್ 2013 ಮತ್ತು ಮಾರ್ಚ್ 2014ರ ನಡುವೆ ಬಂಧನದಲ್ಲಿದ್ದ 116 ಶಂಕಿತರ ಹೇಳಿಕೆಗಳನ್ನು ಆಧರಿಸಿ ಈ ವರದಿಯನ್ನು ಸಿದ್ಧಪಡಿಸಲಾಗಿದೆ.
 ಇತರ ಸೆರೆಮನೆಗಳಲ್ಲೂ ಫೆಲೆಸ್ತೀನಿ ಕೈದಿಗಳಿಗೆ ಹಿಂಸೆ ನೀಡಲು ಇಂಥದೇ ವಿಧಾನಗಳನ್ನು ಅನುಸರಿಸಲಾಗುತ್ತಿದೆ ಎಂದಿದೆ.
‘‘ಅಧಿಕಾರಿಗಳ ಕಾನೂನುಬಾಹಿರ ವರ್ತನೆಯನ್ನು ಕೈದಿಗಳು ಪುನರುಚ್ಚರಿಸುತ್ತಾರೆ’’ ಎಂದು ‘‘ಬ್ಯಾಕ್ಡ್ ಬೈ ದ ಸಿಸ್ಟಮ್’’ ಎಂಬ ಹೆಸರಿನ ವರದಿ ಹೇಳಿದೆ.
ಅದೇ ವೇಳೆ, ವರದಿಯಲ್ಲಿನ ಅಂಕಿಅಂಶಗಳನ್ನು ತಿರುಚಲಾಗಿದೆ ಹಾಗೂ ಆಂತರಿಕ ಭದ್ರತೆಯನ್ನು ಗಮನದಲ್ಲಿಟ್ಟು ಕಾನೂನಿಗೆ ಅನುಗುಣವಾಗಿ ಎಲ್ಲ ಫೆಲೆಸ್ತೀನಿಗಳ ವಿಚಾರಣೆ ನಡೆಸಲಾಗಿದೆ ಎಂದು ಶಿನ್ ಬೆಟ್ ಪ್ರತಿಕ್ರಿಯಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News