×
Ad

ಕೊನೆಗೂ ಮೆಸ್ಸಿ ಜರ್ಸಿ ಪಡೆದ ಅಫ್ಘಾನ್ ಬಾಲಕ

Update: 2016-02-25 23:35 IST

ಕಾಬೂಲ್, ಫೆ.25: ಮೆಸ್ಸಿ ಎಂದು ಮಾರ್ಕ್ ಪೆನ್ನಿನಿಂದ ಬರೆದ ಪ್ಲಾಸ್ಟಿಕ್ ಜರ್ಸಿಯನ್ನು ಧರಿಸಿ ಜಾಲ ತಾಣದಲ್ಲಿ ಸಂಚಲನ ಮೂಡಿಸಿದ್ದ ಅಫ್ಘಾನ್‌ನ 5ರ ಹರೆಯದ ಬಾಲಕ ಮುರ್ತಾಝಾ ಅಹ್ಮದಿಗೆ ಅರ್ಜೆಂಟೀನದ ಫುಟ್ಬಾಲ್ ಸ್ಟಾರ್ ಲಿಯೊನೆಲ್ ಮೆಸ್ಸಿ ಎರಡು ಜರ್ಸಿಯನ್ನು ಕಾಬೂಲ್‌ಗೆ ಕಳುಹಿಸಿಕೊಟ್ಟಿದ್ದಾರೆ.

ಯುನಿಸೆಫ್‌ನ ರಾಯಭಾರಿ ಆಗಿರುವ ಮೆಸ್ಸಿ ಯುನಿಸೆಫ್‌ನ ಮೂಲಕವೇ ತನ್ನ ಹಸ್ತಾಕ್ಷರವಿರುವ ಒಂದು ಜೊತೆ ಜರ್ಸಿಯನ್ನು ಕಳುಹಿಸಿಕೊಟ್ಟಿದ್ದಾರೆ.

ಪೂರ್ವ ಘಝ್ನಿ ಪ್ರಾಂತದಿಂದ ಕಾಬೂಲ್‌ಗೆ ತನ್ನ ಹೆತ್ತವರೊಂದಿಗೆ ತೆರಳಿದ ಅಹ್ಮದಿ ಜರ್ಸಿಯನ್ನು ಪಡೆದಿದ್ದಾರೆ. ಬಡ ಕುಟುಂಬದಿಂದ ಬಂದಿರುವ ಮುರ್ತಾಝಾ ಕುಟುಂಬ ಕಾಬೂಲ್ ಸಮೀಪದ ಹಿಂಸಾಪೀಡಿತ ಪ್ರದೇಶ ಘಝ್ನಿಯಲ್ಲಿ ನೆಲೆಸಿದೆ.

ಅಹ್ಮದಿಯ 15ರ ಹರೆಯದ ಸಹೋದರ ನೀಲಿ-ಬಿಳಿ ಬಣ್ಣದ ಪ್ಲಾಸ್ಟಿಕ್‌ನಿಂದ ಜರ್ಸಿಯನ್ನು ತಯಾರಿಸಿ ಮಾರ್ಕ್ ಪೆನ್ನಿನಿಂದ ಮೆಸ್ಸಿ ಎಂದು ಬರೆದು ತನ್ನ ತಮ್ಮನಿಗೆ ನೀಡಿದ್ದರು. ಅಹ್ಮದಿ ಈ ಜರ್ಸಿಯನ್ನು ಧರಿಸಿ ಸಂಭ್ರಮಿಸಿರುವ ಚಿತ್ರ ಜಾಲತಾಣದಲ್ಲಿ ಹರಿದಾಡಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News