ಪ್ರೊ ಕಬಡ್ಡಿ ಲೀಗ್: ಮುಂಬಾ, ಪಾಟ್ನಾಕ್ಕೆ ಜಯ
Update: 2016-02-25 23:53 IST
ಹೊಸದಿಲ್ಲಿ, ಫೆ.25: ಪ್ರೊ ಕಬಡ್ಡಿ ಲೀಗ್‌ನಲ್ಲಿ ಗುರುವಾರ ಚಾಂಪಿಯನ್ ಯೂ ಮುಂಬಾ ತಂಡ ಹಾಗೂ ಪಾಟ್ನಾ ಪೈರಟ್ಸ್ ಭರ್ಜರಿ ಗೆಲುವು ದಾಖಲಿಸಿವೆ.
ಮೊದಲ ಪಂದ್ಯದಲ್ಲಿ ಮುಂಬಾ ತಂಡ ಬೆಂಗಳೂರು ಬುಲ್ಸ್ ತಂಡವನ್ನು 21 ಅಂಕಗಳ ಅಂತರದಿಂದ ಸೋಲಿಸಿತು. ಮತ್ತೊಂದು ಪಂದ್ಯದಲ್ಲಿ ಪಾಟ್ನಾ ಪೈರಟ್ಸ್ ತಂಡ ದಿಲ್ಲಿ ದಬಾಂಗ್ ತಂಡವನ್ನು 33 ಅಂಕಗಳ ಅಂತರದಿಂದ ಸೋಲಿಸಿ ಅಗ್ರ ಸ್ಥಾನ ಉಳಿಸಿಕೊಂಡಿದೆ.
ಪಾಟ್ನಾ 13 ಪಂದ್ಯಗಳಲಿ 10ನೆ ಜಯ ದಾಖಲಿಸಿ 57 ಅಂಕವನ್ನು ಹಾಗೂ ಮುಂಬಾ ತಂಡ 10ನೆ ಪಂದ್ಯದಲ್ಲಿ 8ನೆ ಜಯ ಗಳಿಸಿ 40 ರನ್ ಗಳಿಸಿ 2ನೆ ಸ್ಥಾನದಲ್ಲಿದೆ