ಕತರ್ ಓಪನ್ ನವರ್ರೊ ಮುಡಿಗೆ ಕತರ್ ಓಪನ್ ಕಿರೀಟ
ದೋಹಾ, ಫೆ.28: ಸ್ಪೇನ್‌ನ ಕಾರ್ಲ ಸುರೆಝ್ ನವರ್ರೋ ಅವರು ಕತರ್ ಓಪನ್ ಫೈನಲ್‌ನಲ್ಲಿ ಲಾಟ್ವಿಯಾದ ಜೆಲೆನಾ ಒಸ್ಟಾಪೆಂಕೊ ವಿರುದ್ಧ 1-6,6-4, 6-4 ಅಂತರದಿಂದ ಜಯಿಸಿದರು.
ಸುರಝ್ ಎಪ್ರಿಲ್ 2014ರಲ್ಲಿ ಎಸ್ಟರೋಲಿಯಲ್ಲಿ ಪ್ರಶಸ್ತಿ ಜಯಿಸಿದ ಬಳಿಕ ಮೊದಲ ಬಾರಿ ಪ್ರಶಸ್ತಿ ಎತ್ತಿದರು. ಇದು ಅವರ ವೃತ್ತಿ ಬದುಕಿನ 2ನೆ ಪ್ರಶಸ್ತಿಯಾಗಿದೆ. ಈ ಮೊದಲು ಅವರು ಮೂರು ಬಾರಿ ಫೈನಲ್ ಪ್ರವೇಶಿಸಿ ಪ್ರಶಸ್ತಿ ವಂಚಿತಗೊಂಡಿದ್ದರು. ಒಸ್ಟಾಪೆಂಕೊ 2014ರ ಜ್ಯೂನಿಯರ್ ವಿಂಬಲ್ಡನ್ ಚಾಂಪಿಯನ್ ಆಗಿದ್ದಾರೆ.
ಮೊದಲ ಸುತ್ತಿನಲ್ಲಿ ನವರ್ರೊ ವಿರುದ್ಧ ಒಸ್ಟಾಪೆಂಕೊ ಮೇಲುಗೈ ಸಾಧಿಸಿದ್ದರು. ಆದರೆ ಬಳಿಕ ಎರಡು ಸುತ್ತುಗಳಲ್ಲಿ 6-4, 6-4 ಅಂತರದಲ್ಲಿ ಸುರೆಝ್ ಮೇಲುಗೈ ಸಾಧಿಸಿದ್ದರು. '' ಈ ವರ್ಷ ಪ್ರಶಸ್ತಿ ಗೆಲ್ಲುವುದರೊಂದಿಗೆ ಅಭಿಯಾನ ಆರಂಭಿಸುವುದು ಮತ್ತು ರ್ಯಾಂಕಿಂಗ್‌ನಲ್ಲಿ ಅಗ್ರ 10ಲ್ಲಿ ಸ್ಥಾನ ಪಡೆಯುವುದು ಕನಸಾಗಿತ್ತು. ಈ ನಿಟ್ಟಿನಲ್ಲಿ ಯಶಸ್ವಿಯಾಗಿರುವೆನು'' ಎಂದು ಸುರೆಝ್ ತಿಳಿಸಿದರು.
ಸುರೆಝ್ ಈ ಟೂರ್ನಿಗೆ ಮೊದಲು ರ್ಯಾಂಕಿಂಗ್‌ನಲ್ಲಿ 11ನೆ ಸ್ಥಾನದಲ್ಲಿದ್ದರು.ಇದೀಗ 6ನೆ ಸ್ಥಾನಕ್ಕೆ ಏರಿದ್ದಾರೆ.
ಸುರೆಝ್ ಈ ಗೆಲುವಿನೊಂದಿಗೆ ಸಾರಾ ಇರಾನಿ ಜೊತೆ ಡಬಲ್ಸ್‌ನ ಫೈನಲ್‌ನಲ್ಲಿ ಇನ್ನೊಂದು ಪ್ರಶಸ್ತಿ ಗೆಲ್ಲುವ ಕನಸಿನೊಂದಿಗೆ ಕ್ರೀಡಾಂಗಣ ಪ್ರವೇಶಿಸಿದ್ದರೂ, ಅವರು ಸೋಲು ಅನುಭವಿಸಿದರು.