×
Ad

ಡಬ್ಲ್ಯುಟಿಎ ವರ್ಲ್ಡ್ ರ್ಯಾಂಕಿಂಗ್: ಸುರೆಝ್ ಜೀವನಶ್ರೇಷ್ಠ ಸಾಧನೆ

Update: 2016-02-29 23:35 IST

ಪ್ಯಾರಿಸ್, ಫೆ.29: ದೋಹಾ ಓಪನ್ ಟೆನಿಸ್ ಟೂರ್ನಮೆಂಟ್‌ನಲ್ಲಿ ಪ್ರಶಸ್ತಿ ಜಯಿಸಿರುವ ಸ್ಪೇನ್‌ನ ಆಟಗಾರ್ತಿ ಕಾರ್ಲ ಸುರೆಝ್ ನವಾರ್ರೋ ಡಬ್ಲ್ಯುಟಿಎ ವರ್ಲ್ಡ್ ರ್ಯಾಂಕಿಂಗ್‌ನಲ್ಲಿ ಜೀವನಶ್ರೇಷ್ಠ ಆರನೆ ಸ್ಥಾನ ತಲುಪಿದ್ದಾರೆ.

ಐದು ಸ್ಥಾನ ಭಡ್ತಿ ಪಡೆದ ನವಾರ್ರೊ ರಶ್ಯದ ಹಿರಿಯ ಆಟಗಾರ್ತಿ ಮರಿಯಾ ಶರಪೋವಾರನ್ನು ಹಿಂದಕ್ಕೆ ತಳ್ಳಿ ಆರನೆ ಸ್ಥಾನಕ್ಕೆ ಜಿಗಿದಿದ್ದಾರೆ.

ಗಾಯದ ಸಮಸ್ಯೆಯಿಂದಾಗಿ ಕಳೆದ ಎರಡು ಟೂರ್ನಿಗಳಿಂದ ಹೊರಗುಳಿದಿದ್ದ ಸೆರೆನಾ ವಿಲಿಯಮ್ಸ್ ಅಗ್ರ ಸ್ಥಾನವನ್ನು ಕಾಯ್ದುಕೊಂಡಿದ್ದಾರೆ.

ಪುರುಷರ ಎಟಿಪಿ ವಿಶ್ವ ರ್ಯಾಂಕಿಂಗ್‌ನಲ್ಲಿ ಆಸ್ಟ್ರೀಯದ 22ರ ಹರೆಯದ ಡೊಮಿನಿಕ್ ಥಿಯೆಮ್ 14 ಸ್ಥಾನ ಭಡ್ತಿ ಪಡೆದಿದ್ದಾರೆ. ರವಿವಾರ ದುಬೈನಲ್ಲಿ ನಡೆದ ದುಬೈ ಓಪನ್ ಟೂರ್ನಿಯನ್ನು ಜಯಿಸಿರುವ ಸ್ವಿಸ್‌ನ ಸ್ಟಾನಿಸ್ಲಾಸ್ ವಾವ್ರಿಂಕ ನಾಲ್ಕನೆ ರ್ಯಾಂಕ್‌ನ್ನು ಉಳಿಸಿಕೊಂಡಿದ್ದಾರೆ.

ಡಬ್ಲ್ಯುಟಿಎ ವರ್ಲ್ಡ್ ರ್ಯಾಂಕಿಂಗ್: 1. ಸೆರೆನಾ ವಿಲಿಯಮ್ಸ್(ಅಮೆರಿಕ), 2. ಆ್ಯಂಜೆಲಿಕ್ ಕೆರ್ಬರ್(ಜರ್ಮನಿ), 3. ಅಗ್ನೆಸ್ಕಾ ರಾಂಡ್ವಾಂಸ್ಕಾ(ಪೊಲೆಂಡ್),4. ಗಾರ್ಬೈನ್ ಮುಗುರುಝ(ಸ್ಪೇನ್), 5. ಸಿಮೋನಾ ಹಾಲೆಪ್(ರೊಮಾನಿಯ), 6. ಕಾರ್ಲಾ ಸುರೆಝ್ ನವಾರ್ರೊ(ಸ್ಪೇನ್), 7. ಮರಿಯಾ ಶರಪೋವಾ(ರಶ್ಯ), 8. ಬೆಲಿಂದ ಬೆನ್ಸಿಕ್(ಸ್ವೀಡನ್), 9. ಪೆಟ್ರಾ ಕ್ವಿಟೋವಾ(ಝೆಕ್), 10. ರಾಬರ್ಟ್ ವಿನ್ಸಿ(ಇಟಲಿ).

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News