×
Ad

ಪ್ರೊಕಬಡ್ಡಿ ಲೀಗ್: ಪುಣೇರಿ ವಿರುದ್ಧ ಮುಂಬಾಗೆ ರೋಚಕ ಜಯ

Update: 2016-02-29 23:45 IST

 ಮುಂಬೈ, ಫೆ.29: ಪ್ರೊ ಕಬಡ್ಡಿ ಲೀಗ್‌ನಲ್ಲಿ ಸೋಮವಾರ ನಡೆದ ಪಂದ್ಯದಲ್ಲಿ ಯು ಮುಂಬಾ ತಂಡ(30) ಪುಣೇರಿ ಪಲ್ಟನ್(27) ತಂಡವನ್ನು ಕೇವಲ 3 ಅಂಕಗಳ ಅಂತರದಿಂದ ರೋಚಕವಾಗಿ ಮಣಿಸಿದೆ.

ಮುಂಬಾ ತಂಡದ ಗೆಲುವಿನಲ್ಲಿ ಕನ್ನಡಿಗ ರಿಶಾಂಕ್ ದೇವಾಡಿಗ, ಅನೂಪ್ ಕುಮಾರ್ ಹಾಗೂ ರಾಕೇಶ್‌ಕುಮಾರ್ ಪ್ರಮುಖ ಕಾಣಿಕೆ ನೀಡಿದರು.

ಈ ಗೆಲುವಿನ ಮೂಲಕ ಮುಂಬಾ ತಂಡ 12 ಪಂದ್ಯಗಳಲ್ಲಿ ಒಟ್ಟು 40 ಅಂಕ ಗಳಿಸಿ ಅಂಕಪಟ್ಟಿಯಲ್ಲಿ ಎರಡನೆ ಸ್ಥಾನದಲ್ಲಿದೆ. ಮುಂಬಾ ತಂಡಕ್ಕೆ ಇನ್ನು ಎರಡು ಪಂದ್ಯಗಳನ್ನು ಆಡಲು ಬಾಕಿಯಿದೆ.

13 ಪಂದ್ಯಗಳಲ್ಲಿ 43 ಅಂಕ ಗಳಿಸಿ 3ನೆ ಸ್ಥಾನದಲ್ಲಿರುವ ಪುಣೇರಿ ಸೆಮಿಫೈನಲ್ ಸ್ಥಾನಕ್ಕಾಗಿ ಬೆಂಗಾಲ್(42) ತಂಡದಿಂದ ಸ್ಪರ್ಧೆ ಎದುರಿಸುತ್ತಿದೆ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News