×
Ad

ವಿಶ್ವಕಪ್‌ನಲ್ಲಿ ಭಾರತವೇ ಫೇವರಿಟ್: ಸೆಹ್ವಾಗ್

Update: 2016-03-01 23:57 IST

ಹೊಸದಿಲ್ಲಿ, ಮಾ.1: ಭಾರತ ತಂಡದಲ್ಲಿ ವಿಶ್ವ ದರ್ಜೆಯ ಆಟಗಾರರಿದ್ದು, ಮುಂಬರುವ ಟ್ವೆಂಟಿ-20 ವಿಶ್ವಕಪ್‌ನಲ್ಲಿ ಪ್ರಶಸ್ತಿ ಜಯಿಸುವ ಫೇವರಿಟ್ ತಂಡವಾಗಿದೆ ಎಂದು ಭಾರತದ ಮಾಜಿ ದಾಂಡಿಗ ವೀರೇಂದ್ರ ಸೆಹ್ವಾಗ್ ಅಭಿಪ್ರಾಯಪಟ್ಟಿದ್ದಾರೆ.

‘‘ನಮ್ಮ ತಂಡದಲ್ಲಿ ರೋಹಿತ್ ಶರ್ಮ, ವಿರಾಟ್ ಕೊಹ್ಲಿ,ಅಜಿಂಕ್ಯ ರಹಾನೆ ಹಾಗೂ ಬೌಲರ್‌ಗಳಾದ ಜಸ್‌ಪ್ರೀತ್ ಬುಮ್ರಾ, ಆಶೀಷ್ ನೆಹ್ರಾ ಹಾಗೂ ಸ್ಪಿನ್ನರ್‌ಗಳಾದ ಜಡೇಜ ಹಾಗೂ ಅಶ್ವಿನ್‌ರಿದ್ದಾರೆ. ನನ್ನ ಪ್ರಕಾರ ಭಾರತ ವಿಶ್ವಕಪ್ ಗೆಲ್ಲಲಿರುವ ನೆಚ್ಚಿನ ತಂಡವಾಗಿದೆ’’ ಎಂದು ಕಳೆದ ವರ್ಷ ಅಂತಾರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತಿಯಾಗಿದ್ದ ಸೆಹ್ವಾಗ್ ಹೇಳಿದಾರೆ..

ರೋಹಿತ್ ಹಾಗೂ ಕೊಹ್ಲಿ ಜೋಡಿಯನ್ನು ಪ್ರಶಂಸಿಸಿದ ಸೆಹ್ವಾಗ್,, ಈ ಇಬ್ಬರು 7 ರಿಂದ 8 ಓವರ್ ತನಕ ಕ್ರೀಸ್‌ನಲ್ಲಿದ್ದರೆ ಯಾರಿಗೂ ಭಾರತವನ್ನು ತಡೆಯಲು ಸಾಧ್ಯವಿಲ್ಲ ಎಂದರು.

ಭಾರತಕ್ಕೆ ಆಸ್ಟ್ರೇಲಿಯ, ದ.ಆಫ್ರಿಕ, ವೆಸ್ಟ್‌ಇಂಡೀಸ್ ಹಾಗೂ ಪಾಕಿಸ್ತಾನ ತಂಡಗಳು ಪ್ರಬಲ ಪೈಪೋಟಿ ನೀಡಲಿವೆ ಎಂದು ಎಚ್ಚರಿಸಿದ ಸೆಹ್ವಾಗ್, ಪ್ರಸ್ತುತ ಪಾಕಿಸ್ತಾನದ ಬೌಲಿಂಗ್ ದಾಳಿ ಬಲಿಷ್ಠವಾಗಿದೆ. ಮುಹಮ್ಮದ್ ಆಮಿರ್ ಮರಳಿದ ನಂತರ ಹೆಚ್ಚು ಶಕ್ತಿಶಾಲಿಯಾಗಿದೆ ಎಂದು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News