×
Ad

ಮತ್ತೆ ಗಾಯದ ಸಮಸ್ಯೆಗೆ ಸಿಲುಕಿದ ಪ್ಯಾಟಿನ್ಸನ್

Update: 2016-03-01 23:58 IST

 ಮೆಲ್ಬೋರ್ನ್, ಮಾ.1: ಆಸ್ಟ್ರೇಲಿಯದ ವೇಗದ ಬೌಲರ್ ಜೇಮ್ಸ್ ಪ್ಯಾಟಿನ್ಸನ್ ಮತ್ತೊಮ್ಮೆ ಗಾಯದ ಸಮಸ್ಯೆಗೆ ಸಿಲುಕಿದ್ದು, ಈ ಋತುವಿನ ಉಳಿದ ಸರಣಿಗಳಿಂದ ಹೊರಗುಳಿದಿದ್ದಾರೆ.

ಗಾಯದ ಸಮಸ್ಯೆಯಿಂದಾಗಿ ಜನವರಿಯಲ್ಲಿ ಆಸ್ಟ್ರೇಲಿಯದಲ್ಲಿ ನಡೆದಿದ್ದ ದೇಶೀಯ ಟ್ವೆಂಟಿ-20 ಟೂರ್ನಮೆಂಟ್‌ನಿಂದ ಹೊರಗುಳಿದಿದ್ದ ಬಲಗೈ ವೇಗದ ಬೌಲರ್ ಪ್ಯಾಟಿನ್ಸನ್ ಇತ್ತೀಚೆಗೆ ಕ್ರೈಸ್ಟ್‌ಚರ್ಚ್‌ನಲ್ಲಿ ನಡೆದ ನ್ಯೂಝಿಲೆಂಡ್ ವಿರುದ್ಧದ ದ್ವಿತೀಯ ಟೆಸ್ಟ್ ಪಂದ್ಯದ ವೇಳೆ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಾಪಸಾಗಿದ್ದರು. 25ರ ಹರೆಯದ ಪ್ಯಾಟಿನ್ಸನ್ ನ್ಯೂಝಿಲೆಂಡ್ ವಿರುದ್ಧದ 2ನೆ ಟೆಸ್ಟ್‌ನಲ್ಲಿ ದ್ವಿತೀಯ ಇನಿಂಗ್ಸ್‌ನಲ್ಲಿ 77 ರನ್‌ಗೆ 4 ವಿಕೆಟ್ ಸೇರಿದಂತೆ ಒಟ್ಟು 6 ವಿಕೆಟ್ ಉರುಳಿಸಿದ್ದರು.

ಪ್ಯಾಟಿನ್ಸನ್ ಗಾಯದ ಸಮಸ್ಯೆಯಿಂದಾಗಿಯೇ ದಕ್ಷಿಣ ಆಫ್ರಿಕ ವಿರುದ್ಧದ ಸೀಮಿತ ಓವರ್ ಪಂದ್ಯಗಳು ಹಾಗೂ ಭಾರತದಲ್ಲಿ ಮುಂದಿನ ವಾರ ಆರಂಭವಾಗಲಿರುವ ಟ್ವೆಂಟಿ-20 ವಿಶ್ವಕಪ್‌ನಲ್ಲಿ ಆಸ್ಟ್ರೇಲಿಯ ತಂಡದಲ್ಲಿ ಸ್ಥಾನ ಪಡೆದಿಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News