ಏಷ್ಯಾಕಪ್ ಟ್ವೆಂಟಿ-20 :ಭಾರತದ ಗೆಲುವಿಗೆ 139 ರನ್ ಸವಾಲು
Update: 2016-03-01 20:40 IST
ಮೀರ್ಪುರ, ಮಾ.1: ಏಷ್ಯಾಕಪ್ ಟ್ವೆಂಟಿ-20 ಟೂರ್ನಿಯ ಏಳನೆ ಪಂದ್ಯದಲ್ಲಿ ಇಂದು ಭಾರತದ ವಿರುದ್ಧ ಶ್ರೀಲಂಕಾ ತಂಡ 20 ಓವರ್‌ಗಳಲ್ಲಿ 9ವಿಕೆಟ್ ನಷ್ಟದಲ್ಲಿ 138 ರನ್ ಗಳಿಸಿದೆ.
ಟಾಸ್ ಸೋತು ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ಶ್ರೀಲಂಕಾ ತಂಡ ಆಶೀಷ್ ನೆಹ್ರಾ, ಜಸ್‌ಪ್ರೀತ್ ಬುಮ್ರಾ , ಅಶ್ವಿನ್ ಮತ್ತು ಹಾರ್ದಿಕ್ ಪಾಂಡ್ಯ ದಾಳಿಗೆ ತತ್ತರಿಸಿ, ಅಗ್ರ ಸರದಿಯ ವಿಕೆಟ್‌ಗಳನ್ನು ಬಹಳ ಬೇಗನೆ ಕೈ ಚೆಲ್ಲಿತು.
ಆರಂಭಿಕ ದಾಂಡಿಗರಾದ ಚಾಂಡಿಮಲ್(4) ಮತ್ತು ತಿಲಕರತ್ನ ದಿಲ್ಶನ್(18), ಜಯಸೂರ್ಯ (3), ನಾಯಕ ಆ್ಯಂಜೆಲೊ ಮ್ಯಾಥ್ಯೂಸ್(18) ಬೇಗನೆ ಔಟಾದರು. ಕಪುಗೆಡೆರ(30), ಸಿರಿವರ್ಧನ (22),ತಿಸ್ಸರಾ ಪೆರೆರಾ (17), ಕುಲಸೇಕರ (13) ಎರಡಂಕೆಯ ಸ್ಕೋರ್ ದಾಖಲಿಸಿ ತಂಡಕ್ಕೆ ಸ್ಪರ್ಧಾತ್ಮಕ ಮೊತ್ತ ದಾಖಲಿಸಲು ನೆರವಾದರು.
ಬುಮ್ರಾ, ಅಶ್ವಿನ್ ಮತ್ತು ಪಾಂಡ್ಯ ತಲಾ 2 ವಿಕೆಟ್ ಹಂಚಿಕೊಂಡರು.