ಮುಂಬೈನಲ್ಲಿ ಅರ್ಜೆಂಟೀನ ಫುಟ್ಬಾಲ್ ಅಕಾಡಮಿ ಸ್ಥಾಪನೆ
Update: 2016-03-04 23:32 IST
ಮುಂಬೈ, ಮಾ.4: ಅರ್ಜೆಂಟೀನದ ರಾಜಧಾನಿ ಬ್ಯುನಸ್ ಐರಿಸ್‌ನಲ್ಲಿರುವ ವಿಶ್ವದ ಖ್ಯಾತ ಫುಟ್ಬಾಲ್ ಕ್ಲಬ್ ಅಟ್ಲೆಟಿಕೊ ಬೊಕಾ ಜೂನಿಯರ್ ಭಾರತದಲ್ಲಿ ಶುಕ್ರವಾರ ಅಕಾಡಮಿಯೊಂದನ್ನು ಸ್ಥಾಪಿಸಿದೆ.
ಬೋಕಾ ಜೂನಿಯರ್ಸ್ ಫುಟ್ಬಾಲ್ ಸ್ಕೂಲ್‌ನ ತಾಂತ್ರಿಕ ನಿರ್ದೇಶಕ ಪೆಟ್ರೊಸ್ ಸಿಡೆರಿಸ್ ಬೋಕಾ ಜೂನಿಯರ್ಸ್ ಫುಟ್ಬಾಲ್ ಶಾಲೆಯನ್ನು ಮುಂಬೈನಲ್ಲಿ ಉದ್ಘಾಟಿಸಿದರು.
ಭಾರತದಲ್ಲಿ ಪ್ರತಿಭಾವಂತ ಫುಟ್ಬಾಲ್ ಆಟಗಾರರಿದ್ದು, ಅವರಿಗೆ ಆರಂಭದಲ್ಲೇ ಉತ್ತೇಜನ ನೀಡಬೇಕು. ಮುಂಬೈನ ಯುವ ಆಟಗಾರರಿಗೆ ಅವಕಾಶ ನೀಡಲಿದ್ದೇವೆ ಎಂದು ಪೆಟ್ರೊಸ್ ತಿಳಿಸಿದರು.