×
Ad

ಮುಂಬಾ-ಪಾಟ್ನಾ ಪ್ರಶಸ್ತಿಗಾಗಿ ಹೋರಾಟ

Update: 2016-03-04 23:35 IST

ಇಂದು ಪ್ರೊ ಕಬಡ್ಡಿ ಲೀಗ್ ಫೈನಲ್

ಹೊಸದಿಲ್ಲಿ, ಮಾ.4: ಹಾಲಿ ಚಾಂಪಿಯನ್ ಯೂ ಮುಂಬಾ ಹಾಗೂ ಪಾಟ್ನಾ ಪೈರಟ್ಸ್ ತಂಡಗಳು ಪ್ರೊ ಕಬಡ್ಡಿ ಲೀಗ್ ಫೈನಲ್‌ನಲ್ಲಿ ಸೆಣಸಾಡಲಿವೆ.

ಶುಕ್ರವಾರ ಇಲ್ಲಿ ನಡೆದ ಲೀಗ್‌ನ ಮೊದಲ ಸೆಮಿಫೈನಲ್‌ನಲ್ಲಿ ಮುಂಬಾ ತಂಡ ಬಂಗಾಳ ವಾರಿಯರ್ಸ್‌ ತಂಡವನ್ನು 12 ಅಂಕಗಳ ಅಂತರದಿಂದ ಮಣಿಸಿ ಫೈನಲ್‌ಗೆ ಪ್ರವೇಶಿಸಿತು. ಮುಂಬಾ 41 ಅಂಕ ಗಳಿಸಿದರೆ, ಬಂಗಾಳ ಕೇವಲ 29 ಅಂಕ ಗಳಿಸಿತ್ತು.

ಎರಡನೆ ಸೆಮಿ ಫೈನಲ್‌ನಲ್ಲಿ ಪ್ರದೀಪ್ ನರ್ವಾಲ್ ಹಾಗೂ ರೋಹಿತ್ ಕುಮಾರ್ ಅವರ ಅತ್ಯುತ್ತಮ ಪ್ರದರ್ಶನದ ನೆರವಿನಿಂದ ಪುಣೇರಿ ಪಲ್ಟನ್ ತಂಡವನ್ನು 40-21 ಅಂತರದಿಂದ ಮಣಿಸಿದ ಪಾಟ್ನಾ ಪೈರಟ್ಸ್ ತಂಡ ಪ್ರಶಸ್ತಿ ಸುತ್ತಿಗೆ ಲಗ್ಗೆ ಇಟ್ಟಿದೆ.

ಪುಣೆ ತಂಡ ಪಂದ್ಯದಲ್ಲಿ 3 ಬಾರಿ ಆಲೌಟಾಯಿತು. ಮೊದಲ 12 ನಿಮಿಷಗಳ ಆಟದಲ್ಲಿ ಎರಡು ಬಾರಿ ಆಲೌಟಾಯಿತು.

ಮುಂಬಾ ಹಾಗೂ ಪಾಟ್ನಾ ತಂಡ ಶನಿವಾರ(ಮಾ.5) ರಾತ್ರಿ 9:00ಕ್ಕೆ ಇಂದಿರಾ ಗಾಂಧಿ ಒಳಾಂಗಣ ಸ್ಟೇಡಿಯಂನಲ್ಲಿ ಪ್ರಶಸ್ತಿಗಾಗಿ ಹೋರಾಟ ನಡೆಸಲಿವೆ. ಕಳೆದ 32 ದಿನಗಳ ಕಾಲ 56 ಪಂದ್ಯಗಳ ಮೂಲಕ ಅಭಿಮಾನಿಗಳ ರಂಜಿಸಿದ್ದ ಪ್ರೊ ಕಬಡ್ಡಿ ಲೀಗ್ ಶನಿವಾರ ರಾತ್ರಿ ಕೊನೆಗೊಳ್ಳಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News