ಧರ್ಮಶಾಲಾಕ್ಕೆ ಪಾಕ್ ಭೇಟಿ ನೀಡಿದರೆ ಪಿಚ್ ಅಗೆದುಹಾಕುತ್ತೇವೆ: ಎಟಿಎಫ್ ಬೆದರಿಕೆ

Update: 2016-03-05 17:35 GMT

  ಧರ್ಮಶಾಲಾ, ಮಾ.5: ಪಾಕಿಸ್ತಾನ ಕ್ರಿಕೆಟ್ ತಂಡಕ್ಕೆ ಭಾರತದ ವಿರುದ್ಧ ಮಾ.19 ರಂದು ಧರ್ಮಶಾಲಾ ಸ್ಟೇಡಿಯಂನಲ್ಲಿ ಟ್ವೆಂಟಿ-20 ವಿಶ್ವಕಪ್ ಪಂದ್ಯ ಆಡಲು ಅವಕಾಶ ನೀಡಬಾರದು ಎಂದು ಭಯೋತ್ಪಾದಕ ವಿರೋಧಿ ದಳ ಬೇಡಿಕೆ ಇಟ್ಟ್ಟಿದ್ದು, ತನ್ನ ಬೇಡಿಕೆಯನ್ನು ಮೀರಿ ವರ್ತಿಸಿದರೆ ಪಿಚ್‌ನ್ನು ಅಗೆದುಹಾಕುತ್ತೇನೆ ಎಂದು ಬೆದರಿಕೆ ಹಾಕಿದೆ.

‘‘ಒಂದು ವೇಳೆ ಪಾಕಿಸ್ತಾನ ತಂಡ ಭಾರತದ ವಿರುದ್ಧ ವಿಶ್ವಕಪ್ ಪಂದ್ಯ ಆಡಲು ಧರ್ಮಶಾಲಾಕ್ಕೆ ಆಗಮಿಸಿದರೆ ಎಚ್‌ಪಿಸಿಎ ಸ್ಟೇಡಿಯಂನ ಪಿಚ್‌ನ್ನು ವಿರೂಪಗೊಳಿಸುತ್ತೇವೆ ಎಂದು ಭಯೋತ್ಪಾದಕ ವಿರೋಧಿ ದಳದ ರಾಷ್ಟ್ರೀಯ ಅಧ್ಯಕ್ಷ ವೀರೇಂದರ್ ಶಾಂಡಿಲ್ಯ ಎಚ್ಚರಿಕೆ ನೀಡಿದ್ದಾರೆ.

‘‘ಪಂದ್ಯದ ವೇಳೆ ಪಾಕಿಸ್ತಾನದಿಂದ ಭಯೋತ್ಪಾದಕರು ಪ್ರವೇಶಿಸುವ ಅಪಾಯವಿದೆ. ಒಂದು ವೇಳೆ ಹಿಮಾಚಲ ಪ್ರದೇಶ ಸರಕಾರ ಪಂದ್ಯ ನಡೆಯಲು ಅವಕಾಶ ನೀಡಿದರೆ ಪಠಾಣ್‌ಕೋಟ್ ವಾಯುನೆಲೆಯ ಮೇಲೆ ನಡೆದ ಉಗ್ರರ ದಾಳಿಗೆ ಪ್ರಾಣ ತೆತ್ತ ಸೈನಿಕರ ಕುಟುಂಬಕ್ಕೆ ಅಗೌರವ ತೋರಿದಂತಾಗುತ್ತದೆ’’ ಎಂದು ಶಾಂಡಿಲ್ಯ ಸುದ್ದಿಗಾರರಿಗೆ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News