×
Ad

ಬಾಂಗ್ಲಾದೇಶದ ಆಲ್‌ರೌಂಡರ್ ಶಾಕಿಬ್‌ಗೆ ಗಾಯ

Update: 2016-03-05 23:46 IST

ಮೀರ್ಪುರ, ಮಾ.5: ಬಾಂಗ್ಲಾದೇಶದ ಉಪ ನಾಯಕ ಹಾಗೂ ಅಗ್ರ ಆಲ್‌ರೌಂಡರ್ ಶಾಕಿಬ್ ಉಲ್ ಹಸನ್‌ಗೆ ಶುಕ್ರವಾರ ಅಭ್ಯಾಸ ನಿರತರಾಗಿದ್ದಾಗ ತೊಡೆ ಮಾಂಸಖಂಡದಲ್ಲಿ ನೋವು ಕಾಣಿಸಿಕೊಂಡಿದೆ.

ಏಷ್ಯಾಕಪ್ ಫೈನಲ್‌ಗೆ ಮೊದಲು ಇದು ಬಾಂಗ್ಲಾದೇಶಕ್ಕೆ ಕಹಿ ಸುದ್ದಿಯಾಗಿದೆ. ಶುಕ್ರವಾರ ನಡೆದ ನೆಟ್‌ಪ್ರಾಕ್ಟೀಸ್‌ನ ವೇಳೆ ಶಾಕಿಬ್ ಎಡ ತೊಡೆಗೆ ಚೆಂಡೊಂದು ಅಪ್ಪಳಿಸಿತ್ತು. ತಕ್ಷಣವೇ ಐಸ್‌ಪ್ಯಾಕ್‌ನ್ನು ಗಾಯದ ಸ್ಥಳಕ್ಕೆ ಇಡಲಾಗಿತ್ತು. ನೋವಿನಿಂದಲೇ ನಡೆದುಕೊಂಡು ಹೋಗಿದ್ದ ಶಾಕಿಬ್ ಶನಿವಾರ ಪ್ರಾಕ್ಟೀಸ್ ನಡೆಸಲು ಯತ್ನಿಸಿದರು. ಆದರೆ, ಹೆಚ್ಚು ಹೊತ್ತು ಅಭ್ಯಾಸ ನಡೆಸಲು ಸಾಧ್ಯವಾಗಲಿಲ್ಲ.

ರವಿವಾರ ನಡೆಯಲಿರುವ ಫೈನಲ್‌ನಲ್ಲಿ ಶಾಕಿಬ್‌ರನ್ನು ಆಡಿಸಬೇಕೇ, ಧರ್ಮಶಾಲಾದಲ್ಲಿ ಆರಂಭವಾಗಲಿರುವ ವಿಶ್ವಕಪ್‌ನ ಅರ್ಹತಾ ಸುತ್ತಿನ ಪಂದ್ಯದಲ್ಲಿ ಅವಕಾಶ ನೀಡುವುದೇ ಎಂಬ ಗೊಂದಲದಲ್ಲಿ ಬಾಂಗ್ಲಾ ತಂಡ ಸಿಲುಕಿದೆ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News