×
Ad

ಪ್ರೊ ಕಬಡ್ಡಿ: ಪಾಟ್ನಾ ಚಾಂಪಿಯನ್

Update: 2016-03-05 23:50 IST

 ಹೊಸದಿಲ್ಲಿ, ಮಾ.5: ಹಾಲಿ ಚಾಂಪಿಯನ್ ಯೂ ಮುಂಬಾ ತಂಡವನ್ನು ಕೇವಲ 3 ಅಂಕದಿಂದ ಮಣಿಸಿದ ಪಾಟ್ನಾ ಪೈರಟ್ಸ್ ತಂಡ ಮೂರನೆ ಆವೃತ್ತಿಯ ಪ್ರೊ ಕಬಡ್ಡಿ ಲೀಗ್‌ನಲ್ಲಿ ಚಾಂಪಿಯನ್ ಆಗಿ ಮೂಡಿಬಂದಿದೆ.

ಶನಿವಾರ ಇಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ಮುಂಬಾ ತಂಡವನ್ನು 31-28 ಅಂತರದಿಂದ ಮಣಿಸಿದ ಪಾಟ್ನಾ ಮೊದಲ ಬಾರಿ ಪ್ರೊ ಕಬಡ್ಡಿ ಟ್ರೋಫಿ ಜಯಿಸಿತು.

ಮೊದಲಾರ್ಧದಲ್ಲಿ 19-11 ರಿಂದ ಮುನ್ನಡೆ ಸಾಧಿಸಿದ್ದ ಪಾಟ್ನಾ ಕೊನೆಯ ತನಕ ಮುನ್ನಡೆಯನ್ನು ಕಾಯ್ದುಕೊಳ್ಳಲು ಯಶಸ್ವಿಯಾಯಿತು. ಸತತ ಮೂರನೆ ಬಾರಿ ಫೈನಲ್‌ಗೆ ತಲುಪಿದ್ದ ಮುಂಬಾ ಸತತ 2ನೆ ಬಾರಿ ಪ್ರಶಸ್ತಿ ಜಯಿಸುವ ಉತ್ಸಾಹದಲ್ಲಿತ್ತು.

ಆದರೆ ಸಂದೀಪ್ ನರ್ವಾಲ್ ನೇತೃತ್ವದ ಪಾಟ್ನಾ ಇದಕ್ಕೆ ಅವಕಾಶ ನೀಡಲಿಲ್ಲ.

ಪುಣೇರಿಗೆ 3ನೆ ಸ್ಥಾನ: ಲೀಗ್‌ನ 3-4ನೆ ಸ್ಥಾನಕ್ಕಾಗಿ ನಡೆದ ಪಂದ್ಯದಲ್ಲಿ ಪುಣೇರಿ ಪಲ್ಟನ್ ತಂಡ ಬಂಗಾಲ ವಾರಿಯರ್ಸ್‌ ತಂಡವನ್ನು 31-27 ಅಂತರದಿಂದ ಮಣಿಸಿ ಮೂರನೆ ಸ್ಥಾನ ಪಡೆದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News