×
Ad

ವಿಶ್ವಕಪ್: ವಿಂಡೀಸ್ ತಂಡದಿಂದ ಸಿಮನ್ಸ್ ಔಟ್

Update: 2016-03-05 23:51 IST

 ಜಮೈಕಾ, ಮಾ.5: ಗಾಯದ ಸಮಸ್ಯೆಗೆ ಸಿಲುಕಿರುವ ವೆಸ್ಟ್‌ಇಂಡೀಸ್ ದಾಂಡಿಗ ಲೆಂಡ್ಲ್ ಸಿಮನ್ಸ್ ಮುಂಬರುವ ಟ್ವೆಂಟಿ-20 ವಿಶ್ವಕಪ್‌ನಿಂದ ಹೊರ ನಡೆದಿದ್ದಾರೆ.

ಅಗ್ರ ಕ್ರಮಾಂಕದ ದಾಂಡಿಗ ಸಿಮ್ಮನ್ಸ್ ಬೆನ್ನುನೋವಿನಿಂದ ಬಳಲುತ್ತಿದ್ದಾರೆ. ಸಿಮನ್ಸ್ ಬದಲಿ ಆಟಗಾರನನ್ನು ಕೂಡಲೇ ಆಯ್ಕೆ ಮಾಡಲಾಗುತ್ತದೆ ಎಂದು ವಿಂಡೀಸ್ ಕ್ರಿಕೆಟ್ ಮಂಡಳಿ ಹೇಳಿದೆ.

ವಿಂಡೀಸ್ ತಂಡದಲ್ಲಿ ಅನುಭವಿ ಆಟಗಾರರಾದ ಡರೆನ್ ಬ್ರಾವೊ, ಆಫ್-ಸ್ಪಿನ್ನರ್ ಸುನೀಲ್ ನರೇನ್ ಹಾಗೂ ಆಲ್‌ರೌಂಡರ್ ಕಿರೊನ್ ಪೊಲಾರ್ಡ್ ವಿವಿಧ ಕಾರಣದಿಂದಾಗಿ ಈಗಾಗಲೇ ವಿಶ್ವಕಪ್‌ನಿಂದ ಹಿಂದೆ ಸರಿದಿದ್ದಾರೆ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News