×
Ad

ಇರಾನಿ ಕಪ್: ಮುಂಬೈ ಬೃಹತ್ ಮೊತ್ತ

Update: 2016-03-07 23:25 IST

ಸೂರ್ಯಕುಮಾರ್ ಯಾದವ್ ಶತಕ

ಮುಂಬೈ, ಮಾ.7: ಅಗ್ರ ಕ್ರಮಾಂಕದ 6 ದಾಂಡಿಗರು 50ಕ್ಕೂ ಅಧಿಕ ರನ್ ಗಳಿಸಿದ ಪರಿಣಾಮ ರಣಜಿ ಚಾಂಪಿಯನ್ ಮುಂಬೈ ತಂಡ ಶೇಷ ಭಾರತದ ವಿರುದ್ಧದ ಇರಾನಿ ಕಪ್‌ನಲ್ಲಿ 603 ರನ್ ಕಲೆ ಹಾಕಿದೆ. ಇರಾನಿ ಕಪ್ ಇತಿಹಾಸದಲ್ಲಿ ಮುಂಬೈ ಎರಡನೆ ಬಾರಿ 500ಕ್ಕೂ ಅಧಿಕ ರನ್ ಗಳಿಸಿದೆ.

ಸೋಮವಾರ 3 ವಿಕೆಟ್‌ಗೆ 386 ರನ್‌ನಿಂದ 2ನೆ ದಿನದಾಟ ಆರಂಭಿಸಿದ ಮುಂಬೈ ತಂಡದ ಪರ 10ನೆ ಶತಕ ಸಿಡಿಸಿದ ಸೂರ್ಯಕುಮಾರ್ ಯಾದವ್(156 ರನ್, 271 ಎಸೆತ, 24 ಬೌಂಡರಿ, 1 ಸಿಕ್ಸರ್) ಆಸರೆಯಾದರು.

ಯಾದವ್‌ಗೆ ನಾಯಕ ಆದಿತ್ಯ ತಾರೆ(65), ಸಿದ್ದೇಶ್ ಲಾಡ್(66) ಸಾಥ್ ನೀಡಿದರು. ಮುಂಬೈ 158.2 ಓವರ್‌ಗಳಲ್ಲಿ 603 ರನ್‌ಗೆ ಆಲೌಟಾಯಿತು.

ಶೇಷ ಭಾರತದ ಪರ ಜಯಂತ್ ಯಾದವ್(4-132) ಯಶಸ್ವಿ ಬೌಲರ್ ಎನಿಸಿಕೊಂಡರು. ಉನದ್ಕಟ್(2-128) ಹಾಗೂ ಕೃಷ್ಣ ದಾಸ್(2-152) ತಲಾ 2 ವಿಕೆಟ್ ಪಡೆದರು.

ಬ್ಯಾಟಿಂಗ್ ಆರಂಭಿಸಿರುವ ಶೇಷ ಭಾರತ 1 ವಿಕೆಟ್ ನಷ್ಟಕ್ಕೆ 36 ರನ್ ಗಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News