×
Ad

ಅಫ್ಘಾನಿಸ್ತಾನಕ್ಕೆ ರೋಚಕ ಜಯ

Update: 2016-03-08 23:22 IST

ನಾಗ್ಪುರ, ಮಾ.8:ಐಸಿಸಿ ಟ್ವೆಂಟಿ-20 ವಿಶ್ವಕಪ್‌ನ ಪ್ರಥಮ ಸುತ್ತಿನ ‘ಬಿ’ ಗುಂಪಿನ ಪಂದ್ಯದಲ್ಲಿ ಇಂದು ಅಫ್ಘಾನಿಸ್ತಾನ ತಂಡ ಸ್ಕಾಟ್ಲೆಂಡ್ ವಿರುದ್ಧ 14 ರನ್‌ಗಳ ಜಯ ಗಳಿಸಿದೆ.
ಗೆಲುವಿಗೆ 171 ರನ್‌ಗಳ ಸವಾಲನ್ನು ಪಡೆದ ಸ್ಕಾಟ್ಲೆಂಡ್ ತಂಡ ನಿಗದಿತ 20 ಓವರ್‌ಗಳಲ್ಲಿ 5 ವಿಕೆಟ್ ನಷ್ಟದಲ್ಲಿ 156 ರನ್ ಗಳಿಸಿತು.

ಆರಂಭಿಕ ದಾಂಡಿಗರಾದ ಮುನ್ಸೆ(41) ಮತ್ತು ಕೊಟ್ಝೆರ್ (40) ಮೊದಲ ವಿಕೆಟ್‌ಗೆ 84 ರನ್‌ಗಳ ಜೊತೆಯಾಟ ನೀಡಿದ್ದರು. ಮಾಚನ್ 36 ರನ್, ನಾಯಕ ಮಾಮ್ಸೆನ್ ಔಟಾಗದೆ 17 ರನ್ ಗಳಿಸಿದರೂ ತಂಡಕ್ಕೆ ಗೆಲುವಿನ ದಡ ಸೇರಲು ಸಾಧ್ಯವಾಗಲಿಲ್ಲ. ಅಫ್ಘಾನಿಸ್ತಾನ 170/5: ಅಫ್ಘಾನಿಸ್ತಾನ ತಂಡ ನಿಗದಿತ 20 ಓವರ್‌ಗಳಲ್ಲಿ 5 ವಿಕೆಟ್ ನಷ್ಟದಲ್ಲಿ 170 ರನ್ ಗಳಿಸಿದೆ.
  ಟಾಸ್ ಜಯಿಸಿ ಬ್ಯಾಟಿಂಗ್ ಆಯ್ದುಕೊಂಡ ಅಫ್ಘಾನಿಸ್ತಾನ ತಂಡಕ್ಕೆ ವಿಕೆಟ್ ಕೀಪರ್ ಮುಹಮ್ಮದ್ ಶಹಝಾದ್ ಮತ್ತು ನಾಯಕ ಅಸ್ಘರ್ ಸ್ಟೇನಿಕ್‌ಝೈ ಎರಡನೆ ವಿಕೆಟ್‌ಗೆ 82 ರನ್‌ಗಳ ಜೊತೆಯಾಟ ನೀಡಿ ಸ್ಕಾಟ್ಲೆಂಡ್‌ಗೆ ಕಠಿಣ ಸವಾಲು ವಿಧಿಸಲು ನೆರವಾದರು.
ಶಹಝಾದ್ 61 ರನ್ (39ಎಸೆತ, 5 ಬೌಂಡರಿ,3 ಸಿಕ್ಸರ್) ಮತ್ತು ಅಸ್ಘರ್ ಔಟಾಗದೆ 55 ರನ್(50 ಎಸೆತ, 2 ಬೌಂಡರಿ,1 ಸಿಕ್ಸರ್) ಗಳಿಸಿದರು.
ನೂರ್ ಅಲಿ ಝದ್ರಾನ್ 17 ರನ್, ಗುಲ್ಬಾದಿನ್ ನಬಿ 12 ರನ್, ಮುಹಮ್ಮದ್ ನಬಿ 1ರನ್, ಶಫೀಕುಲ್ಲಾ 14ರನ್ ಮತ್ತು ದೌಲತ್ ಝದ್ರಾನ್ ಔಟಾಗದೆ 3 ರನ್ ಗಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News