×
Ad

ಭಾರತದ ಸಂಭಾವ್ಯ ತಂಡ ಪ್ರಕಟ

Update: 2016-03-08 23:35 IST

2018ರ ವಿಶ್ವಕಪ್ ಫುಟ್ಬಾಲ್‌ನ ಅರ್ಹತಾ ಪಂದ್ಯ

ಹೊಸದಿಲ್ಲಿ, ಮಾ.8: ಇರಾನ್ ಹಾಗೂ ತುರ್ಕ್‌ಮೆನಿಸ್ತಾನ ವಿರುದ್ಧದ 2018ರ ವಿಶ್ವಕಪ್ ಫುಟ್ಬಾಲ್‌ನ ಪ್ರಾಥಮಿಕ ಅರ್ಹತಾ ಸುತ್ತಿನ ಪಂದ್ಯಗಳಿಗೆ ಸ್ಟಾರ್ ಸ್ಟ್ರೈಕರ್ ಸುನೀಲ್ ಚೆಟ್ರಿ ನೇತೃತ್ವದ 28 ಸದಸ್ಯರನ್ನು ಒಳಗೊಂಡ ಭಾರತದ ಸಂಭಾವ್ಯ ಫುಟ್ಬಾಲ್ ತಂಡವನ್ನು ಮಂಗಳವಾರ ಪ್ರಕಟಿಸಲಾಗಿದೆ.

ಭಾರತ ಮಾ.24 ರಂದು ಇರಾನ್ ವಿರುದ್ಧ ವಿಶ್ವಕಪ್ ಅರ್ಹತಾ ಸುತ್ತಿನ ಪಂದ್ಯ ಆಡಲು ಟೆಹ್ರಾನ್‌ಗೆ ತೆರಳಲಿದೆ. ಮಾ.29 ರಂದು ಕೊಚ್ಚಿಯಲ್ಲಿ ನಡೆಯಲಿರುವ ಪಂದ್ಯದಲ್ಲಿ ತುರ್ಕ್‌ಮೆನಿಸ್ತಾನವನ್ನು ಎದುರಿಸಲಿದೆ.

ಮಾ.21ಕ್ಕೆ ಟೆಹ್ರಾನ್‌ಗೆ ತೆರಳುವ ಮೊದಲು ಭಾರತ ತಂಡ ಹೊಸದಿಲ್ಲಿಯಲ್ಲಿ ಮಾ.16 ರಿಂದ ತರಬೇತಿ ಶಿಬಿರದಲ್ಲಿ ಪಾಲ್ಗೊಳ್ಳಲಿದೆ.

ಭಾರತದ ಸಂಭಾವ್ಯ ಫುಟ್ಬಾಲ್ ತಂಡ:

ಗೋಲ್‌ಕೀಪರ್‌ಗಳು: ಸುಬ್ರತಾ ಪಾಲ್, ಗುರುಪ್ರೀತ್ ಸಿಂಗ್ ಸಂಧು, ಕರಣ್‌ಜಿತ್ ಸಿಂಗ್, ಟಿ.ಪಿ. ರೆಹೆನೀಶ್.

ಡಿಫೆಂಡರ್‌ಗಳು: ಐಬೊರ್ಲಾಂಗ್ ಖೊಂಗ್‌ಜೀ, ಅಗಿಸ್ಟೈನ್ ಫೆರ್ನಾಂಡಿಸ್, ಅರ್ನಾಬ್ ಮಂಡಲ್, ಪ್ರೀತಮ್ ಕೊಟಾಲ್, ಸಂದೇಶ್ ಝಿಂಗಾನ್, ರೈನೊ ಆ್ಯಂಟೊ, ನಾರಾಯಣ್ ದಾಸ್, ಲಾಲ್‌ಚುಯಾನ್‌ಮಾವಿಯಾ.

 ಮಿಡ್ ಫೀಲ್ಡರ್‌ಗಳು: ಪ್ರಣಾಯ್ ಹಲ್ದರ್, ಬಿಕಾಶ್ ಜೈರು, ಕೆವಿನ್ ಲೋಬೊ, ರೌಲ್ವಿನ್ ಬೊರ್ಗೆಸ್, ಅಲ್ವಿನ್ ಜಾರ್ಜ್, ಮುಹಮ್ಮದ್ ರಫೀಕ್, ಫ್ರಾನ್ಸಿಸ್ ಫೆರ್ನಾಂಡಿಸ್, ಹರ್ಮನ್‌ಜೋತ್ ಸಿಂಗ್ ಖಬ್ರಾ, ಉದಾಂತ ಸಿಂಗ್, ವಿನೀತ್ ರೈ, ಸತ್ಯಸೇನ್ ಸಿಂಗ್.

ಫಾರ್ವರ್ಡ್‌ಗಳು: ಜೆಜೆ ಲಾಲ್‌ಪೆಕುಲ್ವ, ಸುನೀಲ್ ಚೆಟ್ರಿ, ಸುಮೀತ್ ಪಾಸ್ಸಿ, ಹಾಲಿಚರಣ್ ನಾರ್ಝರಿ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News