×
Ad

ಧರ್ಮಶಾಲಾ ತಲುಪಿದ ಬಾಂಗ್ಲಾದೇಶ, ಇಂದು ಹಾಲೆಂಡ್ ಎದುರಾಳಿ

Update: 2016-03-08 23:39 IST

ಧರ್ಮಶಾಲಾ, ಮಾ.8: ಏಷ್ಯಾಕಪ್‌ನಲ್ಲಿ ರನ್ನರ್ ಅಪ್ ಪ್ರಶಸ್ತಿ ಪಡೆದಿದ್ದ ಬಾಂಗ್ಲಾದೇಶ ಕ್ರಿಕೆಟ್ ತಂಡ ವಿಶ್ವಕಪ್ ಟ್ವೆಂಟಿ-20 ಟೂರ್ನಿಯನ್ನು ಆಡಲು ಧರ್ಮಶಾಲಾಕ್ಕೆ ಆಗಮಿಸಿದೆ.

ಬುಧವಾರ ನಡೆಯಲಿರುವ ವಿಶ್ವಕಪ್‌ನ ಮೊದಲ ಸುತ್ತಿನ ತನ್ನ ಪ್ರಥಮ ಪಂದ್ಯದಲ್ಲಿ ಬಾಂಗ್ಲಾದೇಶ ತಂಡ ಹಾಲೆಂಡ್ ತಂಡವನ್ನು ಎದುರಿಸಲಿದೆ.

ಸೂಪರ್-10 ಹಂತಕ್ಕೆ ತೇರ್ಗಡೆಯಾಗಲು ಅರ್ಹತಾ ಸುತ್ತಿನ ಪಂದ್ಯ ಅತ್ಯಂತ ಮುಖ್ಯವಾಗಿದೆ. ರವಿವಾರ ಮಳೆ ಬಾಧಿತ ಏಷ್ಯಾಕಪ್ ಪಂದ್ಯದಲ್ಲಿ ಭಾರತದ ವಿರುದ್ಧ 8 ವಿಕೆಟ್‌ಗಳ ಅಂತರದಿಂದ ಸೋತಿರುವ ಬಾಂಗ್ಲಾದೇಶಕ್ಕೆ ಈ ಸೋಲಿನಿಂದ ಯಾವುದೇ ಹಿನ್ನಡೆಯಾಗಿಲ್ಲ ಎಂದು ನಾಯಕ ಮಶ್ರಾಫೆ ಮುರ್ತಝ ಹೇಳಿದ್ದಾರೆ.

ಮೊದಲ ಸುತ್ತಿನಲ್ಲಿ ಎ ಗುಂಪಿನಲ್ಲಿರುವ ಬಾಂಗ್ಲಾದೇಶ ತಂಡ ಹಾಲೆಂಡ್, ಐರ್ಲೆಂಡ್ ಹಾಗೂ ಒಮನ್ ತಂಡಗಳೊಂದಿಗೆ ಸ್ಥಾನ ಪಡೆದಿದೆ.

ಒಂದು ವೇಳೆ, ಬಾಂಗ್ಲಾದೇಶ ತಂಡ ಸೂಪರ್-10ಹಂತಕ್ಕೆ ತೇರ್ಗಡೆಯಾದರೆ ಗ್ರೂಪ್ 2ರಲ್ಲಿ ಭಾರತ, ಪಾಕಿಸ್ತಾನ, ಆಸ್ಟ್ರೇಲಿಯ ಹಾಗೂ ನ್ಯೂಝಿಲೆಂಡ್ ತಂಡವನ್ನು ಸೇರ್ಪಡೆಯಾಗಲಿದೆ.

ಇಂದಿನ ಪಂದ್ಯ

ಬಾಂಗ್ಲಾದೇಶ-ಹಾಲೆಂಡ್

ಸಮಯ: ಮಧ್ಯಾಹ್ನ 3:00

ಐರ್ಲೆಂಡ್-ಒಮನ್

ಸಮಯ: ರಾತ್ರಿ 7:30

ಸ್ಥಳ:ಧರ್ಮಶಾಲಾ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News