ಯುದ್ಧ ಪೀಡಿತ ಸಿರಿಯಾದಲ್ಲಿ ಹಸಿವಿನಿಂದ ಮಕ್ಕಳು ಮೇವು ತಿನ್ನುತ್ತಿದ್ದಾರೆ!

Update: 2016-03-10 06:32 GMT

ಹೊಸದಿಲ್ಲಿ,ಮಾರ್ಚ್.10: ಚಿಲ್ಡ್ರನ್ ವೆಲ್ಫೇರ್ ಆರ್ಗನೈಝೇಶನ್ ಸೇವ್‌ದ ಚಿಲ್ಡ್ರನ್ ಸಿರಿಯಾದ ಮಕ್ಕಳ ಅಸಹಾಯಕ ಪರಿಸ್ಥಿತಿಯನ್ನು ವಿವರಿಸಿದೆ. ಇಲ್ಲಿ ಸುಮಾರು ಹತ್ತು ಲಕ್ಷ ಮಕ್ಕಳಲ್ಲಿ ನಾಲ್ಕನೆ ಒಂದು ಭಾಗದಷ್ಟು ಮಕ್ಕಳು ಹಸಿವಿಗೆ ತುತ್ತಾಗಿದ್ದಾರೆ. ಹಸಿವು ನೀಗಿಸಲಿಕ್ಕಾಗಿ ಜಾನುವಾರುಗಳ ಮೇವನ್ನೇ ತಿನ್ನುವ ಸ್ಥಿತಿ ಎದುರಾಗಿದೆ. ಡಮಾಸ್ಕಸ್‌ನ ಮಡಾಯದಲ್ಲಿ ಹಸಿವಿನಿಂದಾಗಿ ಇಪ್ಪತ್ತೈದಕ್ಕೂ ಹೆಚ್ಚು ಮಕ್ಕಳು ಮೃತರಾಗಿದ್ದಾರೆ.

 ವಿಶ್ವಸಂಸ್ಥೆಯ ಪ್ರಕಾರ ಇಡೀ ಸಿರಿಯಾದ ಹದಿನೆಂಟು ಬೇರೆಬೇರೆ ಪ್ರದೇಶಗಳು ಸರಕಾರ ಅಥವಾ ಬಂಡುಕೋರರ ವಶದಲ್ಲಿವೆ. ಈ ಬೇರೆ ಬೇರೆ ಪ್ರದೇಶಗಳಲ್ಲಿ 4,86,700 ಮಂದಿವಾಸಿಸುತ್ತಿದ್ದು ಇಲ್ಲಿಗೆ ಆಹಾರ ಸರಬರಾಜು ಮಾಡಲು ಸಾಧ್ಯವಾಗಿಲ್ಲ. ಅದರಲ್ಲೂ ಮಡಾಯದ ಜನರು ನಾಯಿ-ಬೆಕ್ಕುಗಳನ್ನು ತಿನ್ನಲು ನಿರ್ಬಂಧಿತರಾಗಿದ್ದಾರೆ. ರಾಜಧಾನಿಗೆ ಸಮೀಪದ ಈ ಪ್ರದೇಶದಲ್ಲಿ 300 ಮಕ್ಕಳು ಪೋಷಕಾಂಶಗಳ ಕೊರತೆ ಎದುರಿಸುತ್ತಿದ್ದಾರೆ.

ಇಲ್ಲಿ ಆಹಾರ ಖರೀದಿಸಲಾಗದಷ್ಟು ದುಬಾರಿಯಾಗಿದೆ. ಈಗ ಫೆ.27ರಿಂದ ಯುದ್ಧ ವಿರಾಮ ಆಗಿರುವುದರಿಂದ ಹೊಸ ನಿರೀಕ್ಷೆಗಳು ಹುಟ್ಟಿಕೊಂಡಿವೆ. ಇಲ್ಲಿಗೆ ಆಹಾರ ಸಾಮಗ್ರಿಗಳನ್ನು ತಲುಪಿಸುವ ಪ್ರಯತ್ನ ನಡೆಯುತ್ತಿವೆ. ವರದಿಗಳು ಹೇಳಿರುವಂತೆ ಅಲ್ಲಿ ಈವರೆಗೆ 1,50,000 ಜನರಿಗೆ ಪರಿಹಾರ ನೆರವು ತಲುಪಿಸಲಾಗಿದೆ. ಆದರೆ ಇದು ಸಾಲದು ಎಂದು ಚ್ಯಾರಿಟಿ ಮತ್ತು ಜನರು ಹೇಳುತ್ತಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News