×
Ad

ಶರಪೋವಾ ಶಿಕ್ಷೆಗೆ ಅರ್ಹರಿದ್ದಾರೆ: ನಡಾಲ್

Update: 2016-03-10 23:37 IST

 ಇಂಡಿಯನ್‌ವೇಲ್ಸ್, ಮಾ.10: ತನ್ನ ತರಬೇತಿ ಪದ್ಧತಿಯನ್ನು ಸಮರ್ಥಿಸಿಕೊಂಡಿರುವ ಸ್ಪೇನ್ ಸೂಪರ್ ಸ್ಟಾರ್ ರಫೆಲ್ ನಡಾಲ್ ಗಾಯದಿಂದ ಬೇಗನೆ ಚೇತರಿಸಿಕೊಳ್ಳಲು ನಿಷೇಧಿತ ಉದ್ದೀಪನಾ ದ್ರವ್ಯವನ್ನು ಸೇವಿಸಿಲ್ಲ ಎಂದು ಹೇಳಿದ್ದಾರೆ.

ಇತ್ತೀಚೆಗೆ ಟೆನಿಸ್ ತಾರೆ ಮರಿಯಾ ಶರಪೋವಾ ಡೋಪಿಂಗ್ ಟೆಸ್ಟ್‌ನಲ್ಲಿ ಫೇಲಾಗಿರುವ ಬಗ್ಗೆ ಪ್ರತಿಕ್ರಿಯಿಸಿರುವ ನಡಾಲ್, ‘‘ಆಕೆಗೆ ಶಿಕ್ಷೆ ನೀಡಲೇಬೇಕು. ಇತರರಿಗೆ ಮಾದರಿಯಾಗುವ ರೀತಿಯಲ್ಲಿ ಆಕೆ ಶಿಕ್ಷೆಗೆ ಅರ್ಹರಿದ್ದಾರೆ.

ನಾನು ಈ ತನಕ ನಿಷೇಧಿತ ಪದಾರ್ಥ ಸೇವಿಸಿಲ್ಲ. ನಾನು ಅದರಿಂದ ತುಂಬಾ ದೂರ. ನಾನು ಪರಿಪೂರ್ಣ ಆಟಗಾರ. ನಾನು ಗಾಯಗೊಂಡಾಗ ಬೇಗನೆ ಚೇತರಿಸಿಕೊಳ್ಳಲು ನಿಷೇಧಿತ ದ್ರವ್ಯವನ್ನು ಈ ತನಕ ಸೇವಿಸಿಲ್ಲ’’ಎಂದು 14 ಬಾರಿಯ ಗ್ರಾನ್‌ಸ್ಲಾಮ್ ಚಾಂಪಿಯನ್ ನಡಾಲ್ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News