ಟ್ವೆಂಟಿ-20 ವಿಶ್ವಕಪ್‌ನಲ್ಲಿ ಭಾಗವಹಿಸಲು ಪಾಕ್ ಕ್ರಿಕೆಟ್ ತಂಡಕ್ಕೆ ಪಾಕ್ ಸರಕಾರದ ಗ್ರೀನ್ ಸಿಗ್ನಲ್
Update: 2016-03-11 17:56 IST
ಹೊಸದಿಲ್ಲಿ, ಮಾ.11: ಪಾಕಿಸ್ತಾನ ಕ್ರಿಕೆಟ್ ತಂಡ ಮುಂಬರುವ ಟ್ವೆಂಟಿ-20 ವಿಶ್ವಕಪ್‌ನಲ್ಲಿ ಭಾಗವಹಿಸುವ ವಿಚಾರದಲ್ಲಿ ಎದುರಾಗಿದ್ದ ಅಡೆತಡೆ ನಿವಾರಣೆಯಾಗಿದ್ದು, ಪಾಕಿಸ್ತಾನ ಸರಕಾರ ವಿಶ್ವಕಪ್‌ನಲ್ಲಿ ಭಾಗವಹಿಸಲು ಪಾಕ್ ತಂಡಕ್ಕೆ ಇಂದು ಗ್ರೀನ್ ಸಿಗ್ನಲ್ ನೀಡಿದೆ.
ಶೀಘ್ರದಲ್ಲೇ ಪಾಕ್ ತಂಡ ಭಾರತಕ್ಕೆ ತೆರಳಲಿದೆ. ಪಾಕ್ ತಂಡಕ್ಕೆ ಗರಿಷ್ಠ ಭದ್ರತೆ ನೀಡುವ ಬಗ್ಗೆ ಭಾರತ ಸರಕಾರ ಈಗಾಗಲೇ ಭರವಸೆ ನೀಡಿದೆ. ಮಾರ್ಚ್ 19ರಂದು ಭಾರತ-ಪಾಕ್ ತಂಡಗಳ ನಡುವೆ ಪಂದ್ಯ ಕೋಲ್ಕತಾದ ಐತಿಹಾಸಿಕ ಈಡನ್ ಗಾರ್ಡನ್ಸ್ ಕ್ರೀಡಾಂಗಣದಲ್ಲಿ ನಡೆಯಲಿದೆ.