ಅಭ್ಯಾಸ ಪಂದ್ಯ: ಭಾರತ ವಿರುದ್ಧ ದಕ್ಷಿಣ ಆಫ್ರಿಕ 196/9
ಮುಂಬೈ, ಮಾ.12: ಆರಂಭಿಕ ದಾಂಡಿಗ ಕ್ವಿಂಟನ್ ಡಿಕಾಕ್(56 ರನ್, 33 ಎಸೆತ, 7 ಬೌಂಡರಿ, 2 ಸಿಕ್ಸರ್) ಹಾಗೂ ಮಧ್ಯಮ ಕ್ರಮಾಂಕದ ದಾಂಡಿಗ ಜೆಪಿ ಡುಮಿನಿ( 67 ರನ್, 44 ಎಸೆತ, 6 ಬೌಂಡರಿ, 3 ಸಿಕ್ಸರ್) ಅರ್ಧಶತಕದ ಕೊಡುಗೆಯ ಸಹಾಯದಿಂದ ದಕ್ಷಿಣ ಆಫ್ರಿಕ ತಂಡ ಭಾರತ ವಿರುದ್ಧದ ಅಭ್ಯಾಸ ಪಂದ್ಯದಲ್ಲಿ 20 ಓವರ್‌ಗಳಲ್ಲಿ 9 ವಿಕೆಟ್‌ಗಳ ನಷ್ಟಕ್ಕೆ 196 ರನ್ ಗಳಿಸಿದೆ.
ಶನಿವಾರ ಇಲ್ಲಿನ ವಾಂಖೆಡೆ ಸ್ಟೇಡಿಯಂನಲ್ಲಿ ಟಾಸ್ ಜಯಿಸಿದ ದಕ್ಷಿಣ ಆಫ್ರಿಕದ ನಾಯಕ ಎಫ್‌ಡು ಪ್ಲೆಸಿಸ್ ಮೊದಲು ಬ್ಯಾಟಿಂಗ್ ಆಯ್ದುಕೊಂಡರು. ದ.ಆಫ್ರಿಕ 4ನೆ ಓವರ್‌ನಲ್ಲಿ 33 ರನ್‌ಗೆ 2 ವಿಕೆಟ್ ಕಳೆದುಕೊಂಡಿತ್ತು. ಆಗ ಡುಮಿನಿಯೊಂದಿಗೆ 3ನೆ ವಿಕೆಟ್‌ಗೆ 77 ರನ್ ಸೇರಿಸಿದ ಡಿಕಾಕ್ ತಂಡಕ್ಕೆ ಆಸರೆಯಾದರು. ಡಿಕಾಕ್ 56 ರನ್ ಗಳಿಸಿ ಗಾಯಾಳು ನಿವೃತ್ತಿಯಾದರು.
ಭಾರತದ ಪರ ಹಾರ್ದಿಕ್ ಪಾಂಡ್ಯ(3-36) ಯಶಸ್ವಿ ಬೌಲರ್ ಎನಿಸಿಕೊಂಡರು. ಜಸ್‌ಪ್ರೀತ್ ಬುಮ್ರಾ(2-51) ಹಾಗೂ ಮುಹಮ್ಮದ್ ಶಮಿ(2-37) ತಲಾ 2 ವಿಕೆಟ್ ಪಡೆದರು. ಹರ್ಭಜನ್ ಸಿಂಗ್ ವಿಕೆಟ್ ಪಡೆಯದಿದ್ದರೂ ಮಿತವ್ಯಯಿ ಎನಿಸಿಕೊಂಡರು.
ಸಂಕ್ಷಿಪ್ತ ಸ್ಕೋರ್
ದಕ್ಷಿಣ ಆಫ್ರಿಕ: 20 ಓವರ್‌ಗಳಲ್ಲಿ 196/9
(ಜೆಪಿ ಡುಮಿನಿ 67, ಕ್ವಿಂಟನ್ ಡಿಕಾಕ್ 56, ಹಾರ್ದಿಕ್ ಪಾಂಡ್ಯ 3-36, ಶಮಿ 2-37, ಬುಮ್ರಾ 2-51)