ತಾಲೀಮು ಪಂದ್ಯ: ಆಸ್ಟ್ರೇಲಿಯಕ್ಕೆ ವಿಂಡೀಸ್ ಆಘಾತ
ಹೇಝಲ್‌ವುಡ್ ಹ್ಯಾಟ್ರಿಕ್ ವ್ಯರ್ಥ, ಮಿಂಚಿದ ಡರೆನ್ ಸಮ್ಮಿ
ಕೋಲ್ಕತಾ, ಮಾ.13: ನಾಯಕ ಡರೆನ್ ಸಮ್ಮಿ ಔಟಾಗದೆ ಬಾರಿಸಿದ 50 ರನ್ ಸಹಾಯದಿಂದ ವೆಸ್ಟ್‌ಇಂಡೀಸ್ ತಂಡ ಆಸ್ಟ್ರೇಲಿಯ ವಿರುದ್ಧದ ಟ್ವೆಂಟಿ-20 ವಿಶ್ವಕಪ್‌ನ ಅಭ್ಯಾಸ ಪಂದ್ಯವನ್ನು 3 ವಿಕೆಟ್‌ಗಳ ಅಂತರದಿಂದ ಗೆದ್ದುಕೊಂಡಿದೆ. ಆಸೀಸ್‌ನ ವೇಗದ ಬೌಲರ್ ಜೋಶ್ ಹೇಝಲ್‌ವುಡ್‌ರ ಹ್ಯಾಟ್ರಿಕ್ ಸಾಧನೆ ವ್ಯರ್ಥವಾಯಿತು.
ಈಡನ್‌ಗಾರ್ಡನ್ಸ್ ಸ್ಟೇಡಿಯಂನಲ್ಲಿ ರವಿವಾರ ನಡೆದ ಅಭ್ಯಾಸ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ್ದ ಆಸ್ಟ್ರೇಲಿಯ ತಂಡ ಆರಂಭಿಕ ದಾಂಡಿಗ ಶೇನ್ ವ್ಯಾಟ್ಸನ್(60 ರನ್, 39 ಎಸೆತ, 4 ಬೌಂಡರಿ, 4 ಸಿಕ್ಸರ್), ನಾಯಕ ಸ್ಟೀವ್ ಸ್ಮಿತ್(36) ಹಾಗೂ ಫಿಂಚ್(33) ಅವರ ಕೊಡುಗೆ ನೆರವಿನಿಂದ 20 ಓವರ್‌ಗಳಲ್ಲಿ 9 ವಿಕೆಟ್ ನಷ್ಟಕ್ಕೆ 161ರನ್ ಗಳಿಸಿತು.
ಫಿಂಚ್-ವ್ಯಾಟ್ಸನ್ ಜೋಡಿ ಮೊದಲ ವಿಕೆಟ್‌ಗೆ 76 ರನ್ ಸೇರಿಸಿ ಉತ್ತಮ ಆರಂಭ ನೀಡಿದರೂ ಡ್ವೇಯ್ನಾ ಬ್ರಾವೊ(4-21),ಎಸ್. ಬೆನ್(3-37) ಹಾಗೂ ಬ್ರಾತ್‌ವೇಟ್(2-16) ಆಸೀಸ್‌ನ್ನು 161 ರನ್‌ಗೆ ನಿಯಂತ್ರಿಸಲು ಯಶಸ್ವಿಯಾದರು.
ಹೇಝಲ್‌ವುಡ್ ಹ್ಯಾಟ್ರಿಕ್ ವ್ಯರ್ಥ: ಗೆಲ್ಲಲು ಕಠಿಣ ಸವಾಲು ಪಡೆದ ವಿಂಡೀಸ್ 12ನೆ ಓವರ್‌ನಲ್ಲಿ 72 ರನ್‌ಗೆ 6 ವಿಕೆಟ್ ಕಳೆದುಕೊಂಡು ಸೋಲಿನತ್ತ ಮುಖ ಮಾಡಿತ್ತು. 4ನೆ ಓವರ್‌ನಲ್ಲಿ ಸತತ ಎಸೆತಗಳಲ್ಲಿ ಹೋಲ್ಡರ್(6), ಸ್ಯಾಮುಯೆಲ್ಸ್(0) ಹಾಗೂ ಡ್ವೇಯ್ನ್ ಬ್ರಾವೊ(0) ವಿಕೆಟ್‌ನ್ನು ಉರುಳಿಸಿದ ಹೇಝಲ್‌ವುಡ್ ಹ್ಯಾಟ್ರಿಕ್ ಸಾಧಿಸಿದ್ದರು.
7ನೆ ವಿಕೆಟ್‌ಗೆ ಬ್ರಾತ್‌ವೇಟ್(33) ಅವರೊಂದಿಗೆ 53 ರನ್ ಹಾಗೂ 8ನೆ ವಿಕೆಟ್‌ಗೆ ನರ್ಸ್(ಔಟಾಗದೆ 12) 37 ರನ್ ಜೊತೆಯಾಟ ನಡೆಸಿದ ನಾಯಕ ಡರೆನ್ ಸಮ್ಮಿ(ಔಟಾಗದೆ 50 ರನ್, 28 ಎಸೆತ, 6 ಬೌಂಡರಿ, 1 ಸಿಕ್ಸರ್) ಗೆಲುವಿನ ರೂವಾರಿಯಾಗಿ ಮೂಡಿಬಂದರು. ಕೇವಲ 1 ಎಸೆತ ಬಾಕಿ ಇರುವಾಗಲೇ ವಿಂಡೀಸ್‌ಗೆ 3 ವಿಕೆಟ್‌ಗಳ ಅಂತರದ ಗೆಲುವು ತಂದುಕೊಟ್ಟರು.
ಸಂಕ್ಷಿಪ್ತ ಸ್ಕೋರ್
ಆಸ್ಟ್ರೇಲಿಯ: 20 ಓವರ್‌ಗಳಲ್ಲಿ 161/9
(ವ್ಯಾಟ್ಸನ್ 60, ಸ್ಮಿತ್ 36, ಫಿಂಚ್ 33, ಬ್ರಾವೊ 4-21, ಬೆನ್ 3-37)
ವೆಸ್ಟ್‌ಇಂಡೀಸ್: 19.5 ಓವರ್‌ಗಳಲ್ಲಿ 162/7
(ಸಮ್ಮಿ ಔಟಾಗದೆ 50, ಬ್ರಾತ್‌ವೇಟ್ 33, ರಸ್ಸ್ಸೆಲ್ 29, ಹೇಝಲ್‌ವುಡ್ 3-13)