×
Ad

ಆಲ್ ಇಂಗ್ಲೆಂಡ್ ಬ್ಯಾಡ್ಮಿಂಟನ್ ಟೂರ್ನಿ: ಲಿನ್ ಡಾನ್ ಚಾಂಪಿಯನ್

Update: 2016-03-13 23:22 IST

ಬರ್ಮಿಂಗ್‌ಹ್ಯಾಮ್, ಮಾ.13: ತನ್ನ ದೇಶದ ಟಿಯಾನ್ ಹೌವೀ ಅವರನ್ನು ನೇರ ಗೇಮ್‌ಗಳ ಅಂತರದಿಂದ ಮಣಿಸಿದ ಚೀನಾದ ಲಿನ್ ಡಾನ್ ಆರನೆ ಬಾರಿ ಆಲ್ ಇಂಗ್ಲೆಂಡ್ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಪ್ರಶಸ್ತಿ ಜಯಿಸಿದರು.

ರವಿವಾರ ನಡೆದ ಪುರುಷರ ಸಿಂಗಲ್ಸ್ ಫೈನಲ್‌ನಲ್ಲಿ ಲಿನ್ ಅವರು ಹೌವೀ ಅವರನ್ನು 21-9, 21-10 ಗೇಮ್‌ಗಳ ಅಂತರದಿಂದ ಮಣಿಸಿದರು. ಕಿಕ್ಕಿರಿದು ನೆರೆದಿದ್ದ ಪ್ರೇಕ್ಷಕರು ಏಳನೆ ಬಾರಿ ಪ್ರಶಸ್ತಿ ಬೇಟೆಯಲ್ಲಿದ್ದ ಟಿಯಾನ್‌ಗೆ ಬೆಂಬಲ ವ್ಯಕ್ತಪಡಿಸಿದರು.

9ನೆ ಬಾರಿ ಆಲ್ ಇಂಗ್ಲೆಂಡ್ ಟೂರ್ನಿಯಲ್ಲಿ ಫೈನಲ್‌ಗೆ ತಲುಪಿದ್ದ ಲಿನ್ ಚಾಂಪಿಯನ್ ಆಗಿ ಮೂಡಿ ಬಂದರು. 12 ವರ್ಷಗಳ ಹಿಂದೆ ಚೊಚ್ಚಲ ಆಲ್ ಇಂಗ್ಲೆಂಡ್ ಚಾಂಪಿಯನ್‌ಶಿಪ್ ಪ್ರಶಸ್ತಿ ಜಯಿಸಿದ್ದ ಲಿನ್ ಡಾನ್ ಇದೀಗ ನಾಲ್ಕು ವರ್ಷಗಳ ನಂತರ ಮತ್ತೊಮ್ಮೆ ಪ್ರಶಸ್ತಿ ಪಡೆದರು. ಎರಡು ವರ್ಷಗಳ ಹಿಂದೆ ಸೆಮಿಫೈನಲ್‌ನಲ್ಲಿ ಗಾಯಾಳು ನಿವೃತ್ತಿಯಾಗಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News