ಭಾರತ-ಕಿವೀಸ್ ಪಂದ್ಯದ ಟಿಕೆಟ್ ಸೋಲ್ಡ್ ಔಟ್
ನಾಗ್ಪುರ, ಮಾ.13: ‘ಆರೆಂಜ್ ಸಿಟಿ’ ನಾಗ್ಪುರದಲ್ಲಿ ಮಾ.15 ರಂದು ನಡೆಯಲಿರುವ ಆತಿಥೇಯ ಭಾರತ ಹಾಗೂ ನ್ಯೂಝಿಲೆಂಡ್ ನಡುವಿನ ವಿಶ್ವಕಪ್‌ನ ಸೂಪರ್-10 ಹಂತದ ಮೊದಲ ಪಂದ್ಯದ ಎಲ್ಲ ಟಿಕೆಟ್‌ಗಳು ಮಾರಾಟವಾಗಿವೆ. ವಿಸಿಎ ಸ್ಟೇಡಿಯಂ 44,900 ಪ್ರೇಕ್ಷಕರ ಸಾಮರ್ಥ್ಯ ಹೊಂದಿದ್ದು, ಎಲ್ಲ ಟಿಕೆಟ್‌ಗಳು ಮಾರಾಟವಾಗಿವೆ. ಆನ್‌ಲೈನ್ ಲಾಟರಿಯಲ್ಲಿ ವಿಜೇತರಾಗುವ ಅದೃಷ್ಟವಂತ ಅಭಿಮಾನಿಗೆ ಇವತ್ತು ಇಲ್ಲವೇ ನಾಳೆ ಟಿಕೆಟ್‌ನ್ನು ಹಸ್ತಾಂತರಿಸಲಾಗುತ್ತದೆ ಎಂದು ವಿಸಿಎ ಮೂಲಗಳು ತಿಳಿಸಿವೆ.
ವಿಶ್ವಕಪ್ ಪಂದ್ಯದ ಟಿಕೆಟ್ ಬೆಲೆ 500 ರೂ.ರಿಂದ 7,500 ರೂ. ತನಕ ಇದೆ. ಕಾರ್ಪೊರೇಟ್ ಬಾಕ್ಸ್‌ನ ಟಿಕೆಟ್ ದರ 5 ಲಕ್ಷ ರೂ. ಇದೆ ಎಂದು ಮೂಲಗಳು ತಿಳಿಸಿವೆ. ಭಾರತ ತಂಡ ನಾಗ್ಪುರದಲ್ಲಿ 2009ರಲ್ಲಿ ನಡೆದ ಏಕೈಕ ಟ್ವೆಂಟಿ-20 ಪಂದ್ಯದಲ್ಲಿ ಶ್ರೀಲಂಕಾವನ್ನು 25 ರನ್‌ಗಳ ಅಂತರದಿಂದ ಮಣಿಸಿತ್ತು.
ನಾಗ್ಪುರ 2009ರ ನಂತರ ಇದೇ ಮೊದಲ ಬಾರಿ ಐಸಿಸಿ ಟೂರ್ನಿಯಲ್ಲಿ ಟ್ವೆಂಟಿ-20 ಪಂದ್ಯದ ಆತಿಥ್ಯವನ್ನು ವಹಿಸಿಕೊಂಡಿದೆ. ಈಗಾಗಲೇ ಮೊದಲ ಸುತ್ತಿನ 6 ಪಂದ್ಯಗಳ ಆತಿಥ್ಯವಹಿಸಿರುವ ನಾಗ್ಪುರ ಸೂಪರ್ 10ರಲ್ಲಿ ಎರಡು ಹಾಗೂ ಮಹಿಳಾ ವಿಶ್ವಕಪ್‌ನಲ್ಲಿ 2 ಪಂದ್ಯದ ಆತಿಥ್ಯವನ್ನು ವಹಿಸಿಕೊಳ್ಳಲಿದೆ.