×
Ad

ವಿಶ್ವಕಪ್ ನಲ್ಲಿ ನಾವೇ ಫೆವರಿಟ್ : ವಿರಾಟ್ ಕೊಹ್ಲಿ

Update: 2016-03-14 21:47 IST

ಮುಂಬೈ, ಮಾ. 14 : ಈ ಬಾರಿಯ ಟಿ20 ವಿಶ್ವಕಪ್ ನಲ್ಲಿ ನಾವೇ ಫೆವರಿಟ್ ಗಳು ಎಂಬ ಆತ್ಮವಿಶ್ವಾಸ ನಮಗಿದೆ ಎಂದು ಟೀಮ್ ಇಂಡಿಯಾದ ಸ್ಟಾರ್ ಆಟಗಾರ ಹಾಗು ಅತ್ಯುತ್ತಮ ಫಾರ್ಮ್ ನಲ್ಲಿರುವ ವಿರಾಟ್ ಕೊಹ್ಲಿ ಹೇಳಿದ್ದಾರೆ. 2016 ರಲ್ಲಿ11 ಪಂದ್ಯಗಳಲ್ಲಿ ಹತ್ತನ್ನು ನಾವು ಗೆದ್ದಿದ್ದೇವೆ. ಅಶ್ವಿನ್ ರಂತಹ ವಿಶ್ವಶ್ರೇಷ್ಠ ಬೌಲರ್ ನಮ್ಮ ಬಳಿ ಇದ್ದಾರೆ. ಕಳೆದ ಐದೂ ಟಿ20 ವಿಶ್ವಕಪ್ ಗಳಲ್ಲಿ ಆಡಿದ ಧೋನಿ , ಯುವರಾಜ್  ಹಾಗು ರೋಹಿತ್ ಇದ್ದಾರೆ. ಜೊತೆಗೆ ಅನುಭವಿಗಳು ಹಾಗು ಯುವಪ್ರತಿಭೆಗಳ ಸಂಗಮದ ತಂಡ ನಮ್ಮದು. ಈ ಎಲ್ಲ ಕಾರಣಗಳಿಂದ ಈ ಬಾರಿ ನಾವು ಚಾಂಪಿಯನ್ ಗಳಾಗುವ ವಿಶ್ವಾಸದಲ್ಲಿ ಟೂರ್ನಿ ಪ್ರಾರಂಭಿಸುತ್ತಿದ್ದೇವೆ ಎಂದು ವಿರಾಟ್ ಹೇಳಿದ್ದಾರೆ. 

ಮಂಗಳವಾರ ನ್ಯೂಜ್ಹಿಲ್ಯಾಂಡ್ ವಿರುದ್ಧ ನಾಗಪುರದಲ್ಲಿ ಭಾರತ ಮೊದಲ ಪಂದ್ಯವನ್ನು ಆಡಲಿದೆ. 

" ನಾವೀಗ ಅತ್ಯುತ್ತಮ ಫಾರ್ಮ್ ನಲ್ಲಿದ್ದೇವೆ. ಏಷ್ಯಾ ಕಪ್ ಕೂಡ ನಮಗೆ ಈ ನಿಟ್ಟಿನಲ್ಲಿ ಸಹಕಾರಿಯಾಗಿತ್ತು. ಆದರೆ ಇಲ್ಲಿ ಸವಾಲು ದೊಡ್ಡದಿದೆ. ಇಡೀ ವಿಶ್ವದ ಅತ್ಯುತ್ತಮ ತಂಡಗಳನ್ನು ನಾವು ಇಲ್ಲಿ ಎದುರಿಸಲಿದ್ದೇವೆ " ಎಂದು ವಿರಾಟ್ ಹೇಳಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News