ಇಂಡಿಯನ್ ವೇಲ್ಸ್ ಟೂರ್ನಿ:ಜೊಕೊವಿಕ್ ಮೂರನೆ ಸುತ್ತಿಗೆ ಲಗ್ಗೆ
ಇಂಡಿಯನ್ ವೇಲ್ಸ್, ಮಾ.14: ವಿಶ್ವದ ನಂ.1 ಆಟಗಾರ ನೊವಾಕ್ ಜೊಕೊವಿಕ್ ಇಂಡಿಯನ್ ವೇಲ್ಸ್ ಹಾರ್ಡ್ ಕೋರ್ಟ್ ಟೆನಿಸ್ ಟೂರ್ನಿಯಲ್ಲಿ ಮೂರನೆ ಸುತ್ತಿಗೆ ತೇರ್ಗಡೆಯಾಗಿದ್ದಾರೆ.
ರವಿವಾರ ನಡೆದ ಪುರುಷರ ಸಿಂಗಲ್ಸ್‌ನ ಎರಡನೆ ಸುತ್ತಿನ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಜೊಕೊವಿಕ್ ಅವರು ಜೋರ್ನ್ ಫ್ರಾಟೆಂಗೆಲೊರನ್ನು 2-6, 6-1, 6-2 ನೇರ ಸೆಟ್‌ಗಳ ಅಂತರದಿಂದ ಮಣಿಸಿದರು.
ಇಂಡಿಯನ್ ವೇಲ್ಸ್‌ನಲ್ಲಿ ಸತತ 12ನೆ ಪಂದ್ಯವನ್ನು ಜಯಿಸಿರುವ ಜೊಕೊವಿಕ್ ಟೂರ್ನಿಯ ಇತಿಹಾಸದಲ್ಲಿ ಐದು ಪ್ರಶಸ್ತಿಗಳನ್ನು ಜಯಿಸಿದ ಮೊದಲ ಆಟಗಾರನೆಂಬ ಗೌರವಕ್ಕೆ ಪಾತ್ರರಾಗಲು ಎದುರು ನೋಡುತ್ತಿದ್ದಾರೆ.
ಹಾಲಿ ಆಸ್ಟ್ರೇಲಿಯನ್ ಓಪನ್ ಚಾಂಪಿಯನ್ ಜೊಕೊವಿಕ್ ಇಂಡಿಯನ್ ವೇಲ್ಸ್ ಟೂರ್ನಿಯನ್ನು ಜಯಿಸುವ ಮೂಲಕ ಇನ್ನು ಎರಡೇ ತಿಂಗಳಲ್ಲಿ ಆರಂಭವಾಗಲಿರುವ ಫ್ರೆಂಚ್ ಓಪನ್‌ಗೆ ಪೂರ್ವ ತಯಾರಿ ನಡೆಸುವ ವಿಶ್ವಾಸದಲ್ಲಿದ್ದಾರೆ.
ಜೊಕೊವಿಕ್ ಕಳೆದ ವರ್ಷ ಆಸ್ಟ್ರೇಲಿಯನ್ ಓಪನ್, ವಿಂಬಲ್ಡನ್ ಹಾಗೂ ಯುಎಸ್ ಓಪನ್ ಸಹಿತ ಒಟ್ಟು 11 ಪ್ರಶಸ್ತಿಗಳನ್ನು ಜಯಿಸಿದ್ದರು. ಆದರೆ, ಫ್ರೆಂಚ್ ಓಪನ್ ಪ್ರಶಸ್ತಿ ಜಯಿಸಲು ವಿಫಲರಾಗಿದ್ದರು.
ಜೊಕೊವಿಕ್ ಮುಂದಿನ ಸುತ್ತಿನಲ್ಲಿ ಜರ್ಮನಿಯ ಫಿಲಿಪ್ ಕೆ. ಅವರನ್ನು ಎದುರಿಸಲಿದ್ದಾರೆ.
ಸೆರೆನಾ ನಾಲ್ಕನೆ ಸುತ್ತಿಗೆ ಲಗ್ಗೆ
ಕ್ಯಾಲಿಫೋರ್ನಿಯಾ, ಮಾ.14: ವಿಶ್ವದ ನಂ.1 ಆಟಗಾರ್ತಿ ಸೆರೆನಾ ವಿಲಿಯಮ್ಸ್ ಇಂಡಿಯನ್ ವೇಲ್ಸ್ ಟೆನಿಸ್ ಟೂರ್ನಿಯಲ್ಲಿ ನಾಲ್ಕನೆ ಸುತ್ತಿಗೆ ತೇರ್ಗಡೆಯಾಗಿದ್ದಾರೆ.
ರವಿವಾರ ಇಲ್ಲಿ ನಡೆದ ಮಹಿಳೆಯರ ಸಿಂಗಲ್ಸ್‌ನ 3ನೆ ಸುತ್ತಿನ ಪಂದ್ಯದಲ್ಲಿ ಅಗ್ರ ಶ್ರೇಯಾಂಕಿತೆ ಸೆರೆನಾ ರಶ್ಯದ ಯೂಲಿಯಾ ಪುಟಿನ್‌ಸೋವಾರನ್ನು 7-6(2), 6-0 ಸೆಟ್‌ಗಳ ಅಂತರದಿಂದ ಮಣಿಸಿದರು.
ಮತ್ತೊಂದು ಸಿಂಗಲ್ಸ್‌ನಲ್ಲಿ ವಿಶ್ವದ ನಂ.3ನೆ ಆಟಗಾರ್ತಿ ಅಗ್ನೆಸ್ಕಾ ರಾಂಡಾಂಸ್ಕಾ ಅವರು ಮೊನಿಕಾ ನಿಕುಲೆಸ್ಕೊ ವಿರುದ್ಧ 6-2, 6-1 ಸೆಟ್‌ಗಳಿಂದ ಗೆಲುವು ಸಾಧಿಸಿದ್ದಾರೆ.
2014ರ ಇಂಡಿಯನ್ ವೇಲ್ಸ್ ಟೂರ್ನಿಯಲ್ಲಿ ಫೈನಲ್‌ಗೆ ತಲುಪಿದ್ದ ರಾಂಡ್ವಾಂಸ್ಕಾ ಇಟಲಿಯ ಫ್ಲಾವಿಯಾ ಪೆನ್ನೆಟ್ಟಾ ವಿರುದ್ಧ ಸೋತಿದ್ದರು.
ಎರಡು ಗಂಟೆಗಳ ಕಾಲ ನಡೆದ ಮ್ಯಾರಥಾನ್ ಪಂದ್ಯದಲ್ಲಿ 8ನೆ ಶ್ರೇಯಾಂಕದ ಪೆಟ್ರಾ ಕ್ವಿಟೋವಾ ಅವರು ಜೊಶನ್ನಾ ಲಾರ್ಸನ್‌ರನ್ನು 6-3, 4-6, 7-5 ಸೆಟ್‌ಗಳ ಅಂತರದಿಂದ ಮಣಿಸಿದರು.