ಕ್ರೋವ್ ಗೌರವಾರ್ಥ ಕಪ್ಪುಪಟ್ಟಿ ಧರಿಸಲಿರುವ ಕಿವೀಸ್
Update: 2016-03-14 23:40 IST
ನಾಗ್ಪುರ, ಮಾ.14: ಇತ್ತೀಚೆಗೆ ನಿಧನರಾದ ಮಾಜಿ ನಾಯಕ ಮಾರ್ಟಿನ್ ಕ್ರೋವ್ ಗೌರವಾರ್ಥ ನ್ಯೂಝಿಲೆಂಡ್ ಕ್ರಿಕೆಟ್ ತಂಡದ ಸದಸ್ಯರು ಮಂಗಳವಾರ ಭಾರತ ವಿರುದ್ಧದ ಟ್ವೆಂಟಿ-20 ವಿಶ್ವಕಪ್‌ನ ಸೂಪರ್-10 ಪಂದ್ಯದಲ್ಲಿ ಕೈಗೆ ಕಪ್ಪುಪಟ್ಟಿ ಕಟ್ಟಿಕೊಂಡು ಕಣಕ್ಕಿಳಿಯಲಿದ್ದಾರೆ.
ಮಂಗಳವಾರದ ಪಂದ್ಯದಲ್ಲಿ ನಾವೆಲ್ಲರೂ ಕೈಗೆ ಕಪ್ಪುಪಟ್ಟಿ ಕಟ್ಟಿಕೊಂಡು ಇತ್ತೀಚೆಗೆ ನಮ್ಮನ್ನಗಲಿದೆ ಕ್ರೋವ್‌ಗೆ ಗೌರವ ಸಲ್ಲಿಸಲಿದ್ದೇವೆ ಎಂದು ಕಿವೀಸ್ ನಾಯಕ ಕೇನ್ ವಿಲಿಯಮ್ಸನ್ ಮಾಹಿತಿ ನೀಡಿದರು.
ನ್ಯೂಝಿಲೆಂಡ್‌ನ ಕ್ರಿಕೆಟ್ ದಂತಕತೆ 53ರ ಹರೆಯದ ಕ್ರೋವ್ ಮಾ.3 ರಂದು ಆಕ್ಲೆಂಡ್‌ನಲ್ಲಿ ದೀರ್ಘಕಾಲದ ಅಸೌಖ್ಯದಿಂದ ನಿಧನರಾಗಿದ್ದರು.