×
Ad

ಕುವೈಟ್‌ನ ವಿಶ್ವಕಪ್ ಅರ್ಹತಾ ಪಂದ್ಯ ರದ್ದುಪಡಿಸಿದ ಫಿಫಾ

Update: 2016-03-14 23:41 IST

 ಝೂರಿಕ್, ಮಾ.14: ಕುವೈಟ್ ತಂಡ ಆಡಬೇಕಾಗಿದ್ದ ಲಾವೊಸ್ ಹಾಗೂ ದಕ್ಷಿಣ ಕೊರಿಯಾ ವಿರುದ್ಧದ ಏಷಿಯನ್ ವಿಶ್ವಕಪ್ ಅರ್ಹತಾ ಸುತ್ತಿನ ಪಂದ್ಯಗಳನ್ನು ಫಿಫಾ ರದ್ದುಗೊಳಿಸಿದೆ.

ಕುವೈಟ್‌ನಲ್ಲಿ ಫುಟ್ಬಾಲ್ ಸಂಸ್ಥೆಯ ಕಾರ್ಯಚಟುವಟಿಕೆಗಳಲ್ಲಿ ಅಲ್ಲಿನ ಸರಕಾರ ಮಧ್ಯಪ್ರವೇಶಿಸುತ್ತಿದೆ ಎಂಬ ಕಾರಣಕ್ಕೆ ಕಳೆದ ಅಕ್ಟೋಬರ್‌ನಲ್ಲಿ ಫಿಫಾ ಕುವೈಟ್ ಫುಟ್ಬಾಲ್ ತಂಡಕ್ಕೆ ಅಂತಾರಾಷ್ಟ್ರೀಯ ಪಂದ್ಯ ಆಡಲು ನಿಷೇಧ ಹೇರಿತ್ತು.

ಕಳೆದ ನವೆಂಬರ್‌ನಲ್ಲಿ ಮೈನ್ಮಾರ್ ವಿರುದ್ಧದ ಕುವೈಟ್‌ನ ಅರ್ಹತಾ ಸುತ್ತಿನ ಪಂದ್ಯ ರದ್ದಾಗಿತ್ತು. ‘ಜಿ’ ಗುಂಪಿನಲ್ಲಿರುವ ಕುವೈಟ್ ತಂಡ 8 ಅಂಕ ಗಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News