ಕ್ಯಾವಿಟಿ ಕಿರಿಕಿರಿ ಇನ್ನಿಲ್ಲ, ಶೀಘ್ರ ಕ್ಯಾವಿಟಿ ತಡೆಯುವ ಮಾತ್ರೆ ?

Update: 2016-03-15 08:40 GMT

ವಾಷಿಂಗ್ಟನ್: ಹಲ್ಲಿನೊಳಗೆ ಗುಳಿ (ಕುಹರ) ಬೀಳುವ ಅಥವಾ ಕ್ಯಾವಿಟಿ ಸಮಸ್ಯೆಗಳು ಸಾಮಾನ್ಯ. ಆದರೆ ಬಾಯಿಯಲ್ಲಿ ಕೆಟ್ಟ ಸೂಕ್ಷ್ಮಾಣುಜೀವಿಗಳ ಮೇಲೆ ಕಣ್ಣಿಡಬಲ್ಲ ಬ್ಯಾಕ್ಟೀರಿಯದ ಪಡೆಯನ್ನು ಈಗ ವಿಜ್ಞಾನಿಗಳು ಕಂಡುಕೊಂಡಿದ್ದು, ಅದರಿಂದ ಕ್ಯಾವಿಟಿ ಸಮಸ್ಯೆಗಳನ್ನು ನೀಗಿಸಲು ಮೌಖಿಕವಾಗಿ ನುಂಗುವ ಔಷಧಿಗಳು ಬರುವ ಸಾಧ್ಯತೆಯಿದೆ. ಓರಲ್ ಪ್ರೊಬಯೋಟಿಕ್ (ಬಾಯಿಯ ಜೈವಿಕಪರ ಔಷಧಿ) ಒಂದನ್ನು ಅಭಿವೃದ್ಧಿಪಡಿಸಲು ಇನ್ನೂ ಬಹಳಷ್ಟು ಅಧ್ಯಯನದ ಅಗತ್ಯವಿದೆಯಾದರೂ, ಒಂದು ಜೀವಾಣುವನ್ನು ಪತ್ತೆ ಹಚ್ಚಲಾಗಿದೆ. ಸ್ಟ್ರೆಪ್ಟೊಕೊಕಸ್ ಪಡೆ ವಿರುದ್ಧ ಹೋರಾಡಬಲ್ಲ ಎ12 ಎನ್ನುವ ಶಕ್ತಿಯನ್ನು ಕಂಡುಹಿಡಿಯಲಾಗಿದೆ.

ಬಾಯಿಯೊಳಗಿನ ಪರಿಸರ ಅತಿಯಾಗಿ ಆಮ್ಲೀಯವಾದಾಗ ಹಲ್ಲುಗಳ ಕುಹರ ಸಮಸ್ಯೆ ಅಥವಾ ಇತರ ಅನಾರೋಗ್ಯ ಅಭಿವೃದ್ಧಿಯಾಗುತ್ತವೆ. ಆ ಸಂದರ್ಭದಲ್ಲಿ ಹಲ್ಲಿನಲ್ಲಿ ಒಂದು ಬ್ಯಾಕ್ಟೀರಿಯ ಆಮ್ಲವನ್ನು ತಯಾರಿಸುತ್ತದೆ ಮತ್ತು ಆಮ್ಲವು ಹಲ್ಲಿನೊಳಗೆ ಕರಗುತ್ತದೆ ಎಂದು ಫ್ಲೋರಿಡಾ ವಿಶ್ವವಿದ್ಯಾಲಯದ ರಾಬರ್ಟ್ ಬರ್ನ್ ಹೇಳಿದ್ದಾರೆ. ಈ ಹಿಂದಿನ ಅಧ್ಯಯನದಲ್ಲಿ ಯೂರಿಯ ಮತ್ತು ಅಗೈನೈನ್ ಸಂಯುಕ್ತಗಳು ಬಾಯಿಯೊಳಗೆ ಆಮ್ಲವನ್ನು ತಟಸ್ಥಗೊಳಿಸುವ ಬಗ್ಗೆ ಹೇಳಿದ್ದವು. ಅದಕ್ಕೆ ಮೊದಲ ಅಧ್ಯಯನಗಳು ಹಲ್ಲಿನ ಕುಹರಗಳು ಕಡಿಮೆ ಇರುವ ಅಥವಾ ಇಲ್ಲದಿರುವ ಮಕ್ಕಳು ಅಥವಾ ಹಿರಿಯರು ಆರ್ಗೈನೈನ್ ಮುರಿಯುವ ಶಕ್ತಿಯನ್ನು ಚೆನ್ನಾಗಿ ಹೊಂದಿರುತ್ತಾರೆ ಎಂದು ಹೇಳಿದ್ದವು. ವಿಜ್ಞಾನಿಗಳಿಗೆ ಈ ಸಂಯುಕ್ತಗಳನ್ನು ಮುರಿಯಲು ಬ್ಯಾಕ್ಟೀರಿಯ ಬೇಕೆಂದು ತಿಳಿದಿತ್ತೇ ವಿನಾ ಯಾವ ಬ್ಯಾಕ್ಟೀರಿಯ ಎಂದು ತಿಳಿದಿರಲಿಲ್ಲ.

ಎ12ಗೆ ವಿನಾಶಕಾರಿ ಶಕ್ತಿ ಇರುವ ಸ್ಟ್ರೆಪ್ಟೊಕೊಕಸ್ ಬ್ಯಾಕ್ಟೀರಿಯ ವಿರುದ್ಧ ಹೋರಾಡುವ ಶಕ್ತಿ ಇದೆ. ಇದು ಸಕ್ಕರೆಯನ್ನು ಲ್ಯಾಕ್ಟಿಕ್ ಆಸಿಡ್ ಆಗಿ ಚಯಾಪಚಯಗೊಳಿಸುತ್ತದೆ. ಅಧ್ಯಯನಗಳ ಪ್ರಕಾರ ಎ12 ಆಮ್ಲವನ್ನು ತಟಸ್ಥಗೊಳಿಸುವುದು ಮಾತ್ರವಲ್ಲದೆ ಸ್ಟ್ರೆಪ್ಟೊಕೊಕಸ್ ಮ್ಯೂಟನ್ಸ್ ಅನ್ನು ಕೊಲ್ಲುತ್ತದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News