ಅಫ್ಘಾನಿಸ್ತಾನ ವಿರುದ್ಧ ಲಂಕಾದ ಗೆಲುವಿಗೆ 154 ರನ್ ಸವಾಲು
ಕೋಲ್ಕತಾ, ಮಾ.17: ಹಾಲಿ ಚಾಂಪಿಯನ್ ಶ್ರೀಲಂಕಾ ವಿರುದ್ಧ ಇಲ್ಲಿ ಆರಂಭಗೊಂಡ ಟ್ವೆಂಟಿ-20 ವಿಶ್ವಕಪ್‌ನ ಪಂದ್ಯದಲ್ಲಿ 16 ಓವರ್ ಪೂರ್ಣಗೊಂಡಾಗ ಅಫ್ಘಾನಿಸ್ತಾನ 7 ವಿಕೆಟ್ ನಷ್ಟದಲ್ಲಿ 153 ರನ್ ಗಳಿಸಿದೆ.
ನಾಯಕ ಅಸ್ಘರ್ ಸ್ತಾನಿಕ್‌ಝಾಯ್ ಅರ್ಧಶತಕ(62) ದಾಖಲಿಸಿದರು.ನೂರ್ ಅಲಿ ಝದ್ರಾನ್ (20) , ಸಮಿಯುಲ್ಲಾ ಶೆನ್ವಾರಿ ( 25) ಅವರ ಉಪಯುಕ್ತ ಕೊಡುಗೆಯ ಫಲವಾಗಿ ಅಫ್ಘಾನಿಸ್ಥಾನ ತಂಡ ಸ್ಪರ್ಧಾತ್ಮಕ ಮೊತ್ತ ದಾಖಲಿಸಿತು..
ಟಾಸ್ ಜಯಿಸಿ ಬ್ಯಾಟಿಂಗ್ ಆಯ್ದುಕೊಂಡ ಅಫ್ಘಾನಿಸ್ತಾನ ತಂಡ 2.5 ಓವರ್‌ಗಳಲ್ಲಿ 12 ರನ್ ಗಳಿಸುವಷ್ಟರಲ್ಲಿ ಮೊದಲ ವಿಕೆಟ್ ಕಳೆದುಕೊಂಡಿತು.
ಬಳಿಕ ಅಸ್ಘರ್ ಸ್ತಾನಿಕ್‌ಝಾಯ್ ಮತ್ತು ನೂರ್ ಅಲಿ ಝದ್ರಾನ್ ತಂಡವನ್ನು ಆಧರಿಸಿದರು. ಆರಂಭಿಕ ದಾಂಡಿಗ ಮುಹಮ್ಮದ್ ಶಹಝಾದ್(8) , ಕರೀಮ್ ಸಾದಿಕ್(೦), ಮುಹಮ್ಮದ್ ನಬೀ (3) , ಸಫೀಕುಲ್ಲಾ(5) ಬೇಗನೆ ಔಟಾದರು.
ಶ್ರೀಲಂಕಾದ ರಂಗನ್ ಹೆರಾತ್ 24ಕ್ಕೆ2 ಮತ್ತು ತಿಸ್ಸಾರ ಪೆರೆರಾ 33ಕ್ಕೆ 3ವಿಕೆಟ್ ಪಡೆದರು.