ಆಸೀಸ್ ವಿರುದ್ಧ ನ್ಯೂಝಿಲೆಂಡ್‌ಗೆ 8 ರನ್‌ಗಳ ರೋಚಕ ಜಯ
Update: 2016-03-18 16:31 IST
ಧರ್ಮಶಾಲಾ, ಮಾ.18: ಇಲ್ಲಿ ನಡೆದ ಟ್ವೆಂಟಿ-20 ವಿಶ್ವಕಪ್‌ನ ಪಂದ್ಯದಲ್ಲಿ ಆಸ್ಟ್ರೇಲಿಯ ವಿರುದ್ಧ ನ್ಯೂಝಿಲೆಂಡ್ 8 ರನ್‌ಗಳ ರೋಚಕ ಜಯ ಗಳಿಸಿದೆ.
ಗೆಲುವಿಗೆ 143 ರನ್‌ಗಳ ಸವಾಲು ಪಡೆದ ಆಸ್ಟ್ರೇಲಿಯ ನಿಗದಿತ 20 ಓವರ್‌ಗಳಲ್ಲಿ 9ವಿಕೆಟ್ ನಷ್ಟದಲ್ಲಿ 134ರನ್ ಗಳಿಸಿತು.
ನ್ಯೂಝಿಲೆಂಡ್ 142/8: ಟಾಸ್ ಜಯಿಸಿ ಬ್ಯಾಟಿಂಗ್ ಆಯ್ದುಕೊಂಡ ನ್ಯೂಝಿಲೆಂಡ್ ತಂಡ ನಿಗದಿತ 20 ಓವರ್‌ಗಳಲ್ಲಿ 8 ವಿಕೆಟ್ ನಷ್ಟದಲ್ಲಿ 142 ರನ್ ಗಳಿಸಿತ್ತು.
ನ್ಯೂಝಿಲೆಂಡ್ ತಂಡದ ಪರ ಯಾರಿಂದಲೂ ಅರ್ಧಶತಕ ಬರಲಿಲ್ಲ. ಆರಂಭಿಕ ದಾಂಡಿಗ ಮಾರ್ಟಿನ್ ಗಪ್ಟಿಲ್ 39 ರನ್ ಗಳಿಸಿರುವುದು ತಂಡದ ಪರ ದಾಖಲಾಗಿದ್ದ ಗರಿಷ್ಠ ಸ್ಕೋರ್ ಆಗಿತ್ತು. ನಾಯಕ ವಿಲಿಯಮ್ಸನ್ 24 ರನ್, ಮುನ್ರೊ 23ರನ್, ಕೋರಿ ಆ್ಯಂಡರ್ಸನ್ 3 ರನ್ , ರಾಸ್ ಟೇಲರ್ 11ರನ್, ಎಲಿಯೊಟ್ 27 ರನ್ ಗಳಿಸಿದರು.