×
Ad

ರೂಟ್ ಸಾಹಸ:ಆಂಗ್ಲರಿಗೆ ಆಫ್ರಿಕ ವಿರುದ್ಧ ಜಯ

Update: 2016-03-18 19:10 IST

 ಮುಂಬೈ, ಮಾ.18: ಇಂಗ್ಲೆಂಡ್ ತಂಡ ಟ್ವೆಂಟಿ-20 ವಿಶ್ವಕಪ್‌ನ ಸೂಪರ್-10 ಗ್ರೂಪ್ ಹಂತದ ಪಂದ್ಯದಲ್ಲಿ ದಕ್ಷಿಣ ಆಫ್ರಿಕ ವಿರುದ್ಧ 2 ವಿಕೆಟ್‌ಗಳ ಜಯ ಗಳಿಸಿದೆ.
ವಾಂಖೇಡೆ ಸ್ಟೇಡಿಯಂನಲ್ಲಿ ಶುಕ್ರವಾರ ರಾತ್ರಿ ನಡೆದ ಪಂದ್ಯದಲ್ಲಿ ಗೆಲುವಿಗೆ 230 ರನ್‌ಗಳ ಸವಾಲನ್ನು ಪಡೆದ ಇಂಗ್ಲೆಂಡ್  ಇನ್ನೂ2 ಎಸೆತಗಳು ಬಾಕಿ ಇರುವಾಗಲೇ 8 ವಿಕೆಟ್ ನಷ್ಟದಲ್ಲಿ ಗೆಲುವಿಗೆ ಅಗತ್ಯದ ರನ್ ಸೇರಿಸಿತು.
  ರೂಟ್ 83 (44ಎ, 6ಬೌ,4ಸಿ) ಗಳಿಸಿ ತಂಡದ ಗೆಲುವಿನಲ್ಲಿ ದೊಡ್ಡ ಕೊಡುಗೆ ನೀಡಿದರು. ತಂಡದ ಗೆಲುವಿಗೆ 11 ರನ್‌ಗಳ ಆವಶ್ಯಕತೆ ಇದ್ದಾಗ ರೂಟ್ ಔಟಾದರು. ಬಳಿಕ ಎಂಎಂ ಅಲಿ ಔಟಾಗದೆ 12ರನ್  ಗಳಿಸಿ ತಂಡವನ್ನು ಗೆಲುವಿನ ದಡ ಸೇರಿಸಿದರು.
  ಜೋ ರೂಟ್ ಮತ್ತು ಜೊಸ್ ಬಟ್ಲರ್ ಐದನೆ ವಿಕೆಟ್‌ಗೆ 75 ರನ್‌ಗಳ ಜೊತೆಯಾಟ ನೀಡಿದರು. ಬಟ್ಲರ್ 21 ರನ್ ಗಳಿಸಿದ್ದರೂ ರೂಟ್‌ಗೆ ಸಮರ್ಥ ಸಾಥ್ ನೀಡಿದರು.
ಇಂಗ್ಲೆಂಡ್ ತಂಡ ಜೇಸನ್ ರಾಯ್(43), ಅಲೆಕ್ಸ್ ಹೇಲ್ಸ್ (17), ಬೆನ್ ಸ್ಟೋಕ್ಸ್ (15), ಇಯಾನ್ ಮಾರ್ಗನ್(12) ಎರಡಂಕೆಯ ಸ್ಕೋರ್ ದಾಖಲಿಸಿದರು.  ಕ್ರಿಸ್ ಜೋರ್ಡನ್ 5 ರನ್ ಗಳಿಸಿದರು.
ದಕ್ಷಿಣ ಆಫ್ರಿಕ 229/4:ದಕ್ಷಿಣ ಆಫ್ರಿಕ ನಿಗದಿತ 20 ಓವರ್‌ಗಳಲ್ಲಿ 4 ವಿಕೆಟ್ ನಷ್ಟದಲ್ಲಿ 229 ರನ್ ಗಳಿಸಿತ್ತು.
ಟಾಸ್ ಸೋತು ಇಂಗ್ಲೆಂಡ್‌ನಿಂದ ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ದಕ್ಷಿಣ ಆಫ್ರಿಕ ತಂಡಕ್ಕೆ ಆರಂಭಿಕ ದಾಂಡಿಗರಾದ ಹಾಶಿಮ್ ಅಮ್ಲ ಮತ್ತು ಕ್ವಿಂಟನ್ ಡಿ ಕಾಕ್ ಮೊದಲ ವಿಕೆಟ್‌ಗೆ 7.1 ಓವರ್‌ಗಳಲ್ಲಿ 96 ರನ್‌ಗಳ ಜೊತೆಯಾಟ ನೀಡಿದರು.
ಅಮ್ಲ 58 ರನ್(31ಎ, 7ಬೌ,3ಸಿ) ಮತ್ತು ಕ್ವಿಂಟನ್ 52 ರನ್(24ಎ, 7ಬೌ, 3ಸಿ) ಗಳಿಸಿ ತಂಡದ ಖಾತೆಗೆ ಅರ್ಧಶತಕಗಳ ಕೊಡುಗೆ ನೀಡಿ ನಿರ್ಗಮಿಸಿದರು.
ನಾಯಕ ಎಫ್‌ಡು ಪ್ಲೆಸಿಸ್ 17 ರನ್ ಮತ್ತು ಎಬಿಡಿವಿಲಿಯರ್ಸ್‌ 16 ರನ್ ಗಳಿಸಿ ಔಟಾದರು.
 ಜೆಪಿ ಡುಮಿನಿ 54 ರನ್ (28ಎ, 3ಬೌ,3ಸಿ) ಮತ್ತು ಡೇವಿಡ್ ಮಿಲ್ಲರ್ 28 ರನ್ ಗಳಿಸಿ ಔಟಾಗದೆ ಉಳಿದರು.
 ಎಂಎ ಅಲಿ 34ಕ್ಕೆ 2 ವಿಕೆಟ್ , ಆದಿಲ್ ರಶೀದ್ ಮತ್ತು ವಿಲ್ಲಿ ತಲಾ 1 ವಿಕೆಟ್ ಪಡೆದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News