×
Ad

ಭಾರತ-ಪಾಕ್ ವಿಶ್ವಕಪ್ ಪಂದ್ಯ: 8:30ಕ್ಕೆ ಆರಂಭ

Update: 2016-03-19 20:14 IST

 ಟಾಸ್ ಜಯಿಸಿದ ಭಾರತ ಫೀಲ್ಡಿಂಗ್ ಆಯ್ಕೆ

ಕೋಲ್ಕತಾ, ಮಾ.19: ಬೆಳಗ್ಗೆಯಿಂದ ಸುರಿಯುತ್ತಿರುವ ಮಳೆಯಿಂದಾಗಿ ಬಾಧಿತಗೊಂಡಿರುವ ಭಾರತ ಹಾಗೂ ಪಾಕಿಸ್ತಾನ ನಡುವಿನ ಟ್ವೆಂಟಿ-20 ವಿಶ್ವಕಪ್‌ನ ಸೂಪರ್-10 ಪಂದ್ಯ ರಾತ್ರಿ 8:30ಕ್ಕೆ ಆರಂಭವಾಗಲಿದ್ದು, ಟಾಸ್ ಜಯಿಸಿದ ಭಾರತದ ನಾಯಕ ಎಂಎಸ್ ಧೋನಿ ಮೊದಲು ಫೀಲ್ಡಿಂಗ್ ಆಯ್ದುಕೊಂಡಿದ್ದಾರೆ.

8:10ಕ್ಕೆ ಟಾಸ್ ಹಾರಿಸಲಾಯಿತು. ಪಂದ್ಯ ತಲಾ 18 ಓವರ್‌ಗಳಿಂದ ಕೂಡಿರಲಿದ್ದು, ತಲಾ 5 ಓವರ್‌ಗಳ ಪವರ್‌ಪ್ಲೇ ಇರುತ್ತದೆ. ನಾಲ್ಕು ಬೌಲರ್‌ಗಳು ಗರಿಷ್ಠ 5 ಓವರ್ ಬೌಲಿಂಗ್ ಮಾಡಬಹುದು.

ಮಳೆರಾಯ ಬಿಡುವು ಪಡೆದಿದ್ದು, ಮೈದಾನದಲ್ಲಿ ಹಾಸಲಾಗಿರುವ ಪ್ಲಾಸ್ಟಿಕ್ ಹೊದಿಕೆಗಳನ್ನು ತೆಗೆಯಲಾಗುತ್ತಿದೆ. ನೀರನ್ನು ಹೀರುವ ಸೂಪರ್ ಸೋಪರ್ ಯಂತ್ರವನ್ನು ಬಳಸಲಾಗುತ್ತಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News