×
Ad

ಹೊಸದಿಲ್ಲಿಗೆ ಸೆಮಿಫೈನಲ್ ಆತಿಥ್ಯ ಕೈತಪ್ಪುವ ಸಾಧ್ಯತೆ

Update: 2016-03-21 23:50 IST

ಹೊಸದಿಲ್ಲಿ, ಮಾ.21: ಇಲ್ಲಿನ ಫಿರೋಝ್ ಶಾ ಕೋಟ್ಲಾ ಸ್ಟೇಡಿಯಂ ಮತ್ತೊಂದು ಮುಜುಗರದ ಸನ್ನಿವೇಶ ಎದುರಿಸುವಂತಾಗಿದೆ. ಕೋಟ್ಲಾ ಸ್ಟೇಡಿಯಂ ಪ್ರಸ್ತುತ ನಡೆಯುತ್ತಿರುವ ಐಸಿಸಿ ಟ್ವೆಂಟಿ-20 ವಿಶ್ವಕಪ್‌ನಲ್ಲಿ ಮೊದಲ ಸೆಮಿ ಫೈನಲ್ ಆತಿಥ್ಯವಹಿಸಿಕೊಳ್ಳುವ ಅವಕಾಶ ವಂಚಿತವಾಗುವ ಭೀತಿಯಲ್ಲಿದೆ.

ಹೊಸದಿಲ್ಲಿ ಸೆಮಿಫೈನಲ್ ಪಂದ್ಯವಲ್ಲದೆ ಸೂಪರ್-10ರ ಮೂರು ಪಂದ್ಯದ ಆತಿಥ್ಯವಹಿಸಿಕೊಂಡಿದೆ. ಸ್ಟೇಡಿಯಂನ ಆರ್‌ಪಿ ಮೆಹ್ರಾ ಬ್ಲಾಕ್‌ನಲ್ಲಿ ಟಿಕೆಟ್ ಮಾರಾಟದ ಬಗ್ಗೆ ಡೆಲ್ಲಿ ಡಿಸ್ಟ್ರಿಕ್ ಕ್ರಿಕೆಟ್ ಅಸೋಸಿಯೇಶನ್(ಡಿಡಿಸಿಎ) ಅಂತಿಮ ನಿರ್ಧಾರಕ್ಕೆ ಬರಲು ವಿಫಲವಾಗಿದೆ. ಈ ಸಂಬಂಧ ಐಸಿಸಿ ರವಿವಾರ ಅಂತಿಮ ಗಡುವು ನೀಡಿತ್ತು.

ಒಂದು ವೇಳೆ ಬಿಸಿಸಿಐ ನಿಯಮ ಪಾಲಿಸಿದರೆ ಕೋಟ್ಲಾ ಸ್ಟೇಡಿಯಂ ಒಟ್ಟು 1800 ಸೀಟುಗಳನ್ನು ಕಳೆದುಕೊಳ್ಳಲಿದೆ. ಕೋಟ್ಲಾ ಸ್ಟೇಡಿಯಂ ಸೆಮಿಫೈನಲ್ ಪಂದ್ಯದ ಆತಿಥ್ಯ ಕಳೆದುಕೊಂಡರೆ ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂ ಆತಿಥ್ಯವಹಿಸಿಕೊಳ್ಳುವ ಸಾಧ್ಯತೆಯಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News