×
Ad

ಪಾಕ್‌ನ ರಿಯಾಝ್ ಕೊರಳಿಗೆ ಚೆಂಡಿನ ಪೆಟ್ಟು

Update: 2016-03-21 23:52 IST

ಮೊಹಾಲಿ, ಮಾ.21: ಇಲ್ಲಿನ ಪಿಸಿಎ ಸ್ಟೇಡಿಯಂನಲ್ಲಿ ನೆಟ್ ಪ್ರಾಕ್ಟೀಸ್‌ನಲ್ಲಿ ತೊಡಗಿದ್ದ ಪಾಕಿಸ್ತಾನದ ವೇಗದ ಬೌಲರ್ ವಹಾಬ್ ರಿಯಾಝ್‌ಗೆ ಆಕಸ್ಮಿಕವಾಗಿ ಚೆಂಡೊಂದು ಬಡಿದಿದ್ದು, ಮುನ್ನಚ್ಚರಿಕಾಕ್ರಮವಾಗಿ ಅವರಿಗೆ ಖಾಸಗಿ ಆಸ್ಪತ್ರೆಯಲ್ಲಿ ಸ್ಕಾನಿಂಗ್ ಮಾಡಿಸಲಾಗಿದೆ.

ಚೆಂಡೊಂದು ರಿಯಾಝ್‌ರ ಕೊರಳು ಹಾಗೂ ಭುಜದ ನಡುವೆ ಅಪ್ಪಳಿಸಿದೆ. ಮುನ್ನಚ್ಚರಿಕಾ ಕ್ರಮವಾಗಿ ಅವರಿಗೆ ಸ್ಕಾನಿಂಗ್ ಮಾಡಲಾಗಿದೆ. ಆಟಗಾರನೊಬ್ಬ ಎಸೆದಿದ್ದ ಚೆಂಡು ಅವರಿಗೆ ಆಕಸ್ಮಿಕವಾಗಿ ತಾಗಿದೆ. ಎಡಗೈ ವೇಗದ ಬೌಲರ್ ಆರೋಗ್ಯ ಚೆನ್ನಾಗಿದೆ ಎಂದು ಪಾಕಿಸ್ತಾನ ತಂಡದ ಮಾಧ್ಯಮ ಮ್ಯಾನೇಜರ್ ಅಘಾ ಅಕ್ಬರ್ ಪಿಟಿಐಗೆ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News