ಡಚ್ ಫುಟ್ಬಾಲ್ ದಂತಕತೆ ಜೋಹಾನ್ ಕ್ರಯಫ್ ನಿಧನ
Update: 2016-03-24 23:50 IST
ಆ್ಯಮ್‌ಸ್ಟರ್‌ಡಮ್, ಮಾ.24: ಡಚ್ ಫುಟ್ಬಾಲ್ ದಂತಕತೆ ಜೋಹಾನ್ ಕ್ರಯಫ್(68ವರ್ಷ ) ಶ್ವಾಸಕೋಶದ ಕ್ಯಾನ್ಸರ್‌ನಿಂದಾಗಿ ನಿಧನರಾದರು. ಜೊಹಾನ್ 1970ರ ದಶಕದಲ್ಲಿ ವಿಶ್ವ ಶ್ರೇಷ್ಠ ಫುಟ್ಬಾಲ್ ಆಟಗಾರನಾಗಿ ಹೊರಹೊಮ್ಮಿದ್ದರು.
ಮೂರು ಬಾರಿ ಯುರೋಪಿಯನ್ ಕಪ್ ಜಯಿಸಿದ್ದ ಕ್ರಯಫ್ 3 ಬಾರಿ ಯುರೋಪಿಯನ್ ವರ್ಷದ ಆಟಗಾರನಾಗಿ ಆಯ್ಕೆಯಾಗಿದ್ದರು. 1999ರಲ್ಲಿ 20ನೆ ಶತಮಾನದ ಯುರೋಪ್‌ನ ಶ್ರೇಷ್ಠ ಫುಟ್ಬಾಲ್ ಆಟಗಾರನಾಗಿ ನೇಮಕಗೊಂಡಿದ್ದರು.
19 ವರ್ಷಗಳ ವೃತ್ತಿಜೀವನದಲ್ಲಿ ವಿಶ್ವಕಪ್ ಜಯಿಸಲು ವಿಫಲವಾಗಿದ್ದ ಕ್ರಯಫ್ 520 ಪಂದ್ಯಗಳಲ್ಲಿ 392 ಗೋಲು ಬಾರಿಸಿದ್ದರು. 387 ಪಂದ್ಯಗಳಲ್ಲಿ ಕೋಚ್ ಆಗಿದ್ದ ಅವರು 387 ಪಂದ್ಯಗಳಲ್ಲಿ ಜಯ, 75ರಲ್ಲಿ ಡ್ರಾ ಹಾಗೂ 70 ಪಂದ್ಯಗಳಲ್ಲಿ ಸೋತಿದ್ದರು.