ಟ್ವೆಂಟಿ-20 ವಿಶ್ವಕಪ್; ವಿಂಡೀಸ್ ಸೆಮಿಫೈನಲ್‌ಗೆ
ನಾಗ್ಪುರ, ಮಾ.25: ಟ್ವೆಂಟಿ-20 ವಿಶ್ವಕಪ್ ಕ್ರಿಕೆಟ್ ಪಂದ್ಯದಲ್ಲಿ ಇಂದು ದಕ್ಷಿಣ ಆಫ್ರಿಕ ವಿರುದ್ಧ ವೆಸ್ಟ್‌ಇಂಡೀಸ್ 3 ವಿಕೆಟ್‌ಗಳ ಜಯ ಗಳಿಸಿ, ಹ್ಯಾಟ್ರಿಕ್ ಗೆಲುವಿನೊಂದಿಗೆ ಸೆಮಿಫೈನಲ್ ತಲುಪಿದೆ.
ಗೆಲುವಿಗೆ 123 ರನ್‌ಗಳ ಸವಾಲನ್ನು ಪಡೆದಿದ್ದ ವೆಸ್ಟ್‌ಇಂಡೀಸ್ ತಂಡ ಇನ್ನೂ 2 ಎರಡು ಎಸೆತಗಳು ಬಾಕಿ ಇರುವಾಗಲೇ 7 ವಿಕೆಟ್ ನಷ್ಟದಲ್ಲಿ ಅಗತ್ಯದ ರನ್ ಸೇರಿಸಿತು. ವಿಂಡೀಸ್ ಕೊನೆಯ ಹಂತದಲ್ಲಿ ಒತ್ತಡಕ್ಕೆ ಸಿಲುಕಿ ವಿಕೆಟ್‌ಗಳನ್ನು ಕೈ ಚೆಲ್ಲಿದ್ದರೂ, ಚೇತರಿಸಿಕೊಂಡು ಗೆಲುವಿನ ದಡ ಸೇರಿತು.
ವಿಂಡೀಸ್‌ನ ಜಾನ್ಸನ್ ಚಾರ್ಲ್ಸ್ 32 ರನ್, ಆ್ಯಂಡ್ರೆ ಫ್ಲೆಚರ್ 11 ರನ್, ಮರ್ಲಾನ್ ಸ್ಯಾಮುಯೆಲ್ಸ್ 44ರನ್, ಡರ್ರೆನ್ ಬ್ರಾವೊ 8ರನ್, ರಸೆಲ್ 4 ರನ್ , ಬ್ರಾತ್‌ವೇಟ್ ಔಟಾಗದೆ10 ರನ್ ಮತ್ತು ರಾಮ್ದಿನ್ 1 ರನ್ ಗಳಿಸಿ ತಂಡದ ಗೆಲುವಿಗೆ ನೆರವಾದರು.
ದಕ್ಷಿಣ ಆಫ್ರಿಕ 122/8: ದಕ್ಷಿಣ ಆಫ್ರಿಕ 20 ಓವರ್‌ಗಳಲ್ಲಿ 8 ವಿಕೆಟ್ ನಷ್ಟದಲ್ಲಿ 122ರನ್ ಗಳಿಸಿದೆ.
ಟಾಸ್ ಸೋತು ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ದಕ್ಷಿಣ ಆಫ್ರಿಕ ತಂಡ ರಸ್ಸೆಲ್(28ಕ್ಕೆ2), , ಕ್ರಿಸ್ ಗೇಲ್ (17ಕ್ಕೆ2) ಮತ್ತು ಬ್ರಾವೋ (20ಕ್ಕೆ2) ದಾಳಿಗೆ ಸಿಲುಕಿ ದೊಡ್ಡ ಮೊತ್ತದ ಸವಾಲನ್ನು ಸೇರಿಸುವಲ್ಲಿ ಎಡವಿತು.
ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ಕ್ವಿಂಟನ್ ಡಿ ಕಾಕ್ (47) ತಂಡದ ಪರ ಗರಿಷ್ಠ ಸ್ಕೋರ್ ದಾಖಲಿಸಿದರು.
ಎಬಿ ಡಿವಿಲಿಯರ್ಸ್(10), ವೈಸ್ (28), ಕ್ರಿಸ್ ಮೊರಿಸ್ (ಔಟಾಗದೆ 16) ಎರಡಂಕೆಯ ಸ್ಕೋರ್ ದಾಖಲಿಸಿದರು. ಆರಂಭಿಕ ದಾಂಡಿಗ ಹಾಶಿಮ್ ಅಮ್ಲ(1), ನಾಯಕ ಎಫ್ ಡು ಪ್ಲೆಸಿಸ್(9), ರೊಸೌವ್(0), ಮಿಲ್ಲರ್(1) ಬೇಗನೆ ಔಟಾದರು.