×
Ad

ಟ್ವೆಂಟಿ-20 ವಿಶ್ವಕಪ್: ಪಾಕಿಸ್ತಾನಕ್ಕೆ ಫಾಕ್ನರ್ ಪ್ರಹಾರ

Update: 2016-03-25 23:51 IST

ಸೆಮಿಫೈನಲ್‌ನತ್ತ ಆಸೀಸ್, ಅಫ್ರಿದಿ ಪಡೆ ಟೂರ್ನಿಯಿಂದ ಔಟ್

 ಮೊಹಾಲಿ, ಮಾ.25: ನಾಯಕ ಸ್ಟೀವನ್ ಸ್ಮಿತ್(ಔಟಾಗದೆ 61), ಆಲ್‌ರೌಂಡರ್‌ಗಳಾದ ಶೇನ್ ವ್ಯಾಟ್ಸನ್(ಔಟಾಗದೆ 44) ಹಾಗೂ ಜೇಮ್ಸ್ ಫಾಕ್ನರ್(5-27) ಅವರ ಅಮೋಘ ಪ್ರದರ್ಶನದ ನೆರವಿನಿಂದ ಆಸ್ಟ್ರೇಲಿಯ ತಂಡ ಪಾಕಿಸ್ತಾನದ ವಿರುದ್ಧದ ಟ್ವೆಂಟಿ-20 ವಿಶ್ವಕಪ್‌ನ ಸೂಪರ್ 10ರ ಮಹತ್ವದ ಪಂದ್ಯದಲ್ಲಿ 21 ರನ್‌ಗಳ ಅಂತರದಿಂದ ಗೆಲುವು ಸಾಧಿಸಿದೆ.

ಇಲ್ಲಿನ ಪಿಸಿಎ ಸ್ಟೇಡಿಯಂನಲ್ಲಿ ಶುಕ್ರವಾರ ಟಾಸ್ ಜಯಿಸಿದ ಆಸ್ಟ್ರೇಲಿಯ ತಂಡ ಮೊದಲು ಬ್ಯಾಟಿಂಗ್ ಆಯ್ದುಕೊಂಡು ನಿಗದಿತ 20 ಓವರ್‌ಗಳಲ್ಲಿ 4 ವಿಕೆಟ್ ನಷ್ಟಕ್ಕೆ 193 ರನ್ ಗಳಿಸಿತು.

ಗೆಲ್ಲಲು ಕಠಿಣ ಸವಾಲು ಪಡೆದ ಪಾಕಿಸ್ತಾನ 20 ಓವರ್‌ಗಳಲ್ಲಿ 8 ವಿಕೆಟ್‌ಗಳ ನಷ್ಟಕ್ಕೆ 172 ರನ್ ಗಳಿಸಿ ಸೋಲೊಪ್ಪಿಕೊಂಡಿತು. ಆಸ್ಟ್ರೇಲಿಯ ಅಂತಿಮ 5 ಓವರ್‌ಗಳಲ್ಲಿ 66 ರನ್ ಬಾರಿಸಿದರೆ, ಪಾಕಿಸ್ತಾನ ಜೇಮ್ಸ್ ಫಾಕ್ನರ್ ದಾಳಿಗೆ ಸಿಲುಕಿ ಕೊನೆಯ 5 ಓವರ್‌ಗಳಲ್ಲಿ 47 ರನ್ ಗಳಿಸಲಷ್ಟೇ ಶಕ್ತವಾಯಿತು. ಉಭಯ ಇನಿಂಗ್ಸ್‌ನ ಕೊನೆಯ 5 ಓವರ್ ಪಂದ್ಯದ ಚಿತ್ರಣವನ್ನು ಬದಲಿಸಿತು.

ಈ ಗೆಲುವಿನೊಂದಿಗೆ ಆಸ್ಟ್ರೇಲಿಯ ಗ್ರೂಪ್-2ರಲ್ಲಿ ಎರಡನೆ ಸ್ಥಾನಕ್ಕೇರಿದೆ. 3 ಪಂದ್ಯಗಳಲ್ಲಿ ತಲಾ 2 ಜಯ ಸಾಧಿಸಿ ನಾಲ್ಕಂಕವನ್ನು ಪಡೆದಿರುವ ಭಾರತ ಹಾಗೂ ಆಸ್ಟ್ರೇಲಿಯ ರವಿವಾರ ಮೊಹಾಲಿಯಲ್ಲಿ ಮುಖಾಮುಖಿಯಾಗಲಿವೆ. ಈ ಪಂದ್ಯ ಉಭಯ ತಂಡಗಳಿಗೆ ಕ್ವಾರ್ಟರ್ ಫೈನಲ್ ಎನಿಸಿಕೊಂಡಿದೆ.

ಸತತ 3ನೆ ಪಂದ್ಯವನ್ನು ಸೋತಿರುವ ಪಾಕಿಸ್ತಾನ ಟೂರ್ನಿಯಿಂದ ಹೊರ ನಡೆದಿದೆ. ಆಸ್ಟ್ರೇಲಿಯ ವಿರುದ್ಧ ಗೆಲುವಿಗೆ ಕಠಿಣ ಸವಾಲು ಪಡೆದಿದ್ದ ಪಾಕ್ ಮತ್ತೊಮ್ಮೆ ಬ್ಯಾಟಿಂಗ್ ವೈಫಲ್ಯಕ್ಕೆ ಒಳಗಾಯಿತು. ಸೆಮಿ ಫೈನಲ್ ತಲುಪುವ ಅಲ್ಪ ಅವಕಾಶವನ್ನು ಹೊಂದಿದ್ದ ಪಾಕಿಸ್ತಾನಕ್ಕೆ ಆಸೀಸ್ ವಿರುದ್ಧದ ಪಂದ್ಯವನ್ನು ಗೆಲ್ಲಲೇಬೇಕಾಗಿತ್ತು.

ಅತ್ಯುತ್ತಮ ದಾಳಿ ಸಂಘಟಿಸಿದ ಜೇಮ್ಸ್ ಫಾಕ್ನರ್(5-27) ಪಾಕ್‌ಗೆ ಪಂಚ್ ನೀಡಿದರು. ಪಾಕ್‌ನ ಆರಂಭಿಕ ದಾಂಡಿಗರಾದ ಶಾರ್ಜಿಲ್ ಖಾನ್(30) ಹಾಗೂ ಅಹ್ಮದ್ ಶಹಝಾದ್(1) ಉತ್ತಮ ಆರಂಭ ನೀಡಲು ಮತ್ತೊಮ್ಮೆ ವಿಫಲರಾದರು.

  ಶಹಝಾದ್ ವೇಗದ ಬೌಲರ್ ಹೇಝಲ್‌ವುಡ್‌ಗೆ ವಿಕೆಟ್ ಒಪ್ಪಿಸಿದರು. ಶಾರ್ಜಿಲ್ ಖಾನ್(30) ಫಾಕ್ನರ್‌ಗೆ ಕ್ಲೀನ್‌ಬೌಲ್ಡಾದರು. 4ನೆ ಕ್ರಮಾಂಕದಲ್ಲಿ ಆಡಿದ ಉಮರ್ ಅಕ್ಮಲ್ 32 ರನ್ ಗಳಿಸಿ ಸ್ಪಿನ್ನರ್ ಝಾಂಪಗೆ ವಿಕೆಟ್ ಒಪ್ಪಿಸಿದರು.

ಪಾಕ್‌ನ ಪರ ಖಾಲಿದ್ ಲತೀಫ್(46) ಹಾಗೂ ಶುಐಬ್ ಮಲಿಕ್(ಔಟಾಗದೆ 40) ಒಂದಷ್ಟು ಪ್ರತಿರೋಧ ಒಡ್ಡಿದರು. ಆಸೀಸ್ ಗೆಲುವಿನ ರೂವಾರಿ ಫಾಕ್ನರ್ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದರು. ಸ್ಪಿನ್ನರ್ ಆ್ಯಡಮ್ ಝಾಂಪ(2-32) ಎರಡು ವಿಕೆಟ್ ಪಡೆದರು.

ಆಸ್ಟ್ರೇಲಿಯ 193/4: ಇದಕ್ಕೆ ಮೊದಲು ಬ್ಯಾಟಿಂಗ್ ಆಯ್ದುಕೊಂಡಿದ್ದ ಆಸೀಸ್ ಪರ ಇನಿಂಗ್ಸ್ ಆರಂಭಿಸಿದ ಉಸ್ಮಾನ್ ಖ್ವಾಜಾ(21) ಹಾಗೂ ಆ್ಯರೊನ್ ಫಿಂಚ್(15) ಸಾಧಾರಣ ಆರಂಭ ನೀಡಿದರು. 7.2 ಓವರ್‌ಗಳಲ್ಲಿ ಆಸ್ಟ್ರೇಲಿಯ 57 ರನ್‌ಗೆ 3 ವಿಕೆಟ್ ಕಳೆದುಕೊಂಡಿತ್ತು.

ಆಗ 4ನೆ ವಿಕೆಟ್‌ಗೆ 62 ರನ್ ಜೊತೆಯಾಟ ನಡೆಸಿದ ಸ್ಮಿತ್(61 ರನ್, 43 ಎಸೆತ, 7 ಬೌಂಡರಿ) ಹಾಗೂ ಮ್ಯಾಕ್ಸ್‌ವೆಲ್ ತಂಡವನ್ನು ಆಧರಿಸಿದರು. ಮ್ಯಾಕ್ಸ್‌ವೆಲ್(30 ರನ್, 18 ಎಸೆತ, 3 ಬೌಂಡರಿ, 1 ಸಿಕ್ಸರ್) ಔಟಾದ ನಂತರ ಸ್ಮಿತ್ ಅವರೊಂದಿಗೆ ಕೈಜೋಡಿಸಿದ ಶೇನ್ ವ್ಯಾಟ್ಸನ್(ಔಟಾಗದೆ 44, 21 ಎಸೆತ, 4 ಬೌಂಡರಿ, 3 ಸಿಕ್ಸರ್) 5ನೆ ವಿಕೆಟ್‌ಗೆ ಮುರಿಯದ ಜೊತೆಯಾಟದಲ್ಲಿ 74 ರನ್ ಸೇರಿಸಿ ತಂಡ ನಿಗದಿತ 20 ಓವರ್‌ಗಳಲ್ಲಿ 193 ರನ್ ಗಳಿಸಲು ನೆರವಾದರು.

ಪಾಕ್ ಪರ ವಹಾಬ್ ರಿಯಾಝ್(2-35) ಹಾಗೂ ಇಮಾದ್ ವಸೀಂ(2-31) ತಲಾ ಎರಡು ವಿಕೆಟ್ ಪಡೆದರು. ನಾಯಕ ಶಾಹಿದ್ ಅಫ್ರಿದಿ 4 ಓವರ್‌ಗಳಲ್ಲಿ 27 ರನ್ ನೀಡಿದರೂ ವಿಕೆಟ್ ದೊರೆಯಲಿಲ್ಲ.

ಸ್ಕೋರ್ ಪಟ್ಟಿ

ಆಸ್ಟ್ರೇಲಿಯ 20 ಓವರ್‌ಗಳಲ್ಲಿ 193/4

                                              ಖ್ವಾಜಾ ಬಿ ವಹಾಬ್21

                                              ಫಿಂಚ್ ಬಿ ಇಮಾದ್15

                                              ವಾರ್ನರ್ ಬಿ ವಹಾಬ್09

                                              ಸ್ಮಿತ್ ಔಟಾಗದೆ61

                                              ಮ್ಯಾಕ್ಸ್‌ವೆಲ್ ಸಿ ಶಹಝಾದ್ ಬಿ ಇಮಾದ್30

                                              ವ್ಯಾಟ್ಸನ್ ಔಟಾಗದೆ44

                                              ಇತರೆ13

<ವಿಕೆಟ್ ಪತನ: 1-28, 2-42, 3-57, 4-119

<ಬೌಲಿಂಗ್ ವಿವರ:

                                       ಮುಹಮ್ಮದ್ ಆಮಿರ್4-0-39-0

                                       ಮುಹಮ್ಮದ್ ಶಮಿ4-0-53-0

                                       ವಹಾಬ್ ರಿಯಾಝ್4-0-35-2

                                       ಶಾಹಿದ್ ಅಫ್ರಿದಿ4-0-27-0

                                       ಇಮಾದ್ ವಸೀಮ್4-0-31-2

ಪಾಕಿಸ್ತಾನ 20 ಓವರ್‌ಗಳಲ್ಲಿ 172/8

                                                ಶಾರ್ಜಿಲ್ ಖಾನ್ ಬಿ ಫಾಕ್ನರ್30

                                                ಶಹಝಾದ್ ಸಿ ನೀಲ್ ಬಿ ಹೇಝಲ್‌ವುಡ್ 01

                                                ಖಾಲಿದ್ ಲತೀಫ್ ಬಿ ಫಾಕ್ನರ್46

                                                ಉಮರ್ ಅಕ್ಮಲ್ ಬಿ ಝಾಂಪ32

                                                ಶಾಹಿದ್ ಅಫ್ರಿದಿ ಸ್ಟಂಪ್ಡ್ ನೆವಿಲ್ ಬಿ ಝಾಂಪ14

                                                ಶುಐಬ್ ಮಲಿಕ್ ಔಟಾಗದೆ40

                                                ಇಮಾದ್ ವಸೀಮ್ ಸಿ ನೀಲ್ ಬಿ ಫಾಕ್ನರ್ 00

                                                ಸರ್ಫರಾಝ್ ಅಹ್ಮದ್ ಸಿ ಖ್ವಾಜಾ ಬಿ ಫಾಕ್ನರ್02

                                              ವಹಾಬ್ ರಿಯಾಝ್ ಸಿ ಹೇಝಲ್‌ವುಡ್ ಬಿ ಫಾಕ್ನರ್00

                                                ಮುಹಮ್ಮದ್ ಶಮಿ ಔಟಾಗದೆ04

                                                ಇತರೆ03

<ವಿಕೆಟ್ ಪತನ: 1-20, 2-40, 3-85, 4-110, 5-147, 6-147, 7-164, 8-164

<ಬೌಲಿಂಗ್ ವಿವರ

                                       ಹೇಝಲ್‌ವುಡ್4-0-26-1

                                       ಕೌಲ್ಟರ್ ನೀಲ್4-0-45-0

                                       ಫಾಕ್ನರ್4-0-27-5

                                       ವ್ಯಾಟ್ಸನ್2-0-27-0

                                       ಝಾಂಪ4-0-32-2

                                       ಮ್ಯಾಕ್ಸ್‌ವೆಲ್2-0-13-0

                            ಪಂದ್ಯಶ್ರೇಷ್ಠ: ಜೇಮ್ಸ್ ಫಾಕ್ನರ್

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News