ಇರಾನ್‌ಗೆ ಶರಣಾದ ಭಾರತ
Update: 2016-03-25 23:57 IST
2018ರ ಫಿಫಾ ವಿಶ್ವಕಪ್ ಅರ್ಹತಾ ಪಂದ್ಯ
ಟೆಹ್ರಾನ್, ಮಾ.24: 2018ರ ಫಿಫಾ ವಿಶ್ವಕಪ್ ಅರ್ಹತಾ ಸುತ್ತಿನ ಪಂದ್ಯದಲ್ಲಿ ಭಾರತದ ಫುಟ್ಬಾಲ್ ತಂಡದ ಕಳಪೆ ಪ್ರದರ್ಶನ ಮುಂದುವರಿದಿದೆ.
ಗುರುವಾರ ಇಲ್ಲಿ ನಡೆದ ಡಿ ಗುಂಪಿನ ಪಂದ್ಯದಲ್ಲಿ ಭಾರತ ಆತಿಥೇಯ ಇರಾನ್ ವಿರುದ್ಧ 0-4 ಅಂತರದಿಂದ ಹೀನಾಯವಾಗಿ ಸೋತಿದೆ.
ಇರಾನ್‌ಪರ ಹಾಜಿ ಸಫಿ(33ನೆ, 66ನೆ ನಿಮಿಷ) ಅವಳಿ ಗೋಲು ಬಾರಿಸಿದರು. ಅಝವೌನ್(61ನೆ ನಿ.) ಹಾಗೂ ಅಲಿರೆಝಾ(78ನೆ ನಿ.) ತಲಾ ಒಂದು ಗೋಲು ಬಾರಿಸಿದ್ದಾರೆ.
ಭಾರತ ವಿರುದ್ಧ ಗೆಲುವು ಸಾಧಿಸಿರುವ ಇಆನ್ ಡಿ ಗುಂಪಿನಲ್ಲಿ ಒಟ್ಟು 17 ಅಂಕ ಗಳಿಸಿ ಅಗ್ರ ಸ್ಥಾನ ಉಳಿಸಿಕೊಂಡಿದೆ.
ಒಂದೂ ಪಂದ್ಯವನ್ನು ಗೆಲ್ಲಲು ವಿಫಲವಾಗಿರುವ ಭಾರತ ಕೊನೆಯ 3 ಅಂಕದೊಂದಿಗೆ 5ನೆ ಸ್ಥಾನದಲ್ಲಿದೆ. ಮಾ.29 ರಂದು ಕೊಚ್ಚಿಯಲ್ಲಿ ತುರ್ಕ್‌ಮೆನಿಸ್ತಾನದ ವಿರುದ್ಧ ಕೊನೆಯ ಪಂದ್ಯವನ್ನು ಆಡಲಿದೆ.